ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಹೂಡಿಕೆ ಮಾಡಿ ಹೆಚ್ಚಿನ ಲಾಭ ದೊರೆಯುತ್ತದೆ ಎಂಬ ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ 19.06 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದ್ದು, ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೂರುದಾರ ಮಹಿಳೆಯು ಸಾಫ್ಟೊನಿಕ್ ವೆಬ್’ಸೈಟ್ ಹುಡುಕಾಡಿ ಎಪಿಕೆ ಫೈಲ್ ಡೌನ್ಲೊಡ್ ಮಾಡಿದ್ದರು. ಬಳಿಕ ಸಾಫ್ಟೊನಿಕ್ ಆ್ಯಪ್ ಬಳಸಿ ಬ್ಯಾಂಕ್ ಖಾತೆಯ ವಿವರ ನೀಡಿದ್ದರು.
ಹೆಚ್ಚಿನ ಲಾಭದ ಉದ್ದೇಶದಿಂದ ಈ ಆ್ಯಪ್’ನಲ್ಲಿರುವ ನಾನಾ ಕಂಪೆನಿಗಳಿಗೆ ಒಟ್ಟು 19,06,166 ಲಕ್ಷ ರೂ.ಹೂಡಿಕೆ ಮಾಡಿದ್ದರು. ಕೊನೆಗೆ ಮೋಸ ಹೋಗಿರುವ ಅರಿವಾಗಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















