ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸ್ತ್ರೀ ಎಂಬುದು ಸಮಾಜದ ಬಹುದೊಡ್ಡ ಶಕ್ತಿಯಾಗಿದ್ದು, ಈ ಶಕ್ತಿಯಿಂದ ಸಮಾಜದ ಹಾಗೂ ಕುಟುಂಬದ ಏಳಿಗೆ ಸಾಧ್ಯ ಎಂದು ಪ್ರಾಚಾರ್ಯ ವಿಶ್ವನಾಥ ತಿಳಿಸಿದರು.
ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಬಲೀಕರಣವು ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ಹಕ್ಕುಗಳನ್ನು ನೀಡಿ, ಪುರುಷರಂತೆಯೇ ಸಮಾನ ಅವಕಾಶಗಳನ್ನು ಪಡೆಯುವಂತೆ ಮಾಡುವುದಾಗಿದೆ. ಇದು ಆತ್ಮವಿಶ್ವಾಸ ಮೂಡಿಸುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು, ಮತ್ತು ಆರೋಗ್ಯ ಹಾಗೂ ಭದ್ರತೆಯನ್ನು ಖಚಿತಪಡಿಸುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಶಿಕ್ಷಕಿ ರೇಷ್ಮಾ ಬಾನು ಮಾತನಾಡಿ,, ಸ್ತ್ರೀ ಕೇವಲ ಒಂದು ಹೆಸರಲ್ಲ, ಅದೊಂದು ಅದಮ್ಯ ಶಕ್ತಿ, ಪ್ರೀತಿ, ತ್ಯಾಗ ಮತ್ತು ಧೈರ್ಯದ ಸಂಕೇತ. ಸಮಾಜದ ಮೂಲ, ಸಂಸ್ಕೃತಿಯ ಬೆಳಕು ಮತ್ತು ಕುಟುಂಬದ ಶಕ್ತಿಯಾದ ಮಹಿಳೆ (ಅಬಲೆಯಲ್ಲ, ಸಬಲೆ), ಸೃಷ್ಟಿಯ ಮೂಲವೇ ಆಗಿದ್ದಾಳೆ. ತನ್ನ ಸಾಧನೆ, ಸಹನಶೀಲತೆ ಮತ್ತು ಇಚ್ಛಾಶಕ್ತಿಯಿಂದ ಜಗತ್ತನ್ನು ಬದಲಾಯಿಸುವ ಸಾಮರ್ಥ್ಯ ಆಕೆಗಿದೆ. ಸ್ತ್ರೀ ಕೇವಲ ಒಂದು ಪದವಲ್ಲ; ಅವಳು ಧೈರ್ಯ ಮತ್ತು ಶಕ್ತಿಯ ಪ್ರತಿರೂಪ,ಹೆಣ್ಣು ಕುಟುಂಬದ ಮೂಲ, ಸಮಾಜದ ಶಕ್ತಿ, ಸಂಸ್ಕೃತಿಯ ಬೆಳಕು,ಸ್ತ್ರೀ ಶಕ್ತಿಯು ಸೃಜನಶೀಲತೆ ಮತ್ತು ಭಾವನಾತ್ಮಕ ಹರಿವಿನ ದೈವಿಕ ಸಂಕೇತವಾಗಿದೆ,ತಾಯಿ, ಅಕ್ಕ, ತಂಗಿ, ಹೆಂಡತಿಯಾಗಿ ವಿವಿಧ ಪಾತ್ರಗಳಲ್ಲಿ ಆಕೆ ತ್ಯಾಗದ ಸಂಕೇತವಾಗಿದ್ದಾಳೆ,ಇತಿಹಾಸದುದ್ದಕ್ಕೂ ಹೆಣ್ಣು ಶಕ್ತಿಯ ಪ್ರತೀಕವೇ ಆಗಿದ್ದಾಳೆ. ಎಂದು ಸಾಧಕ ಮಹಿಳೆಯರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶ್ರೀ ಮತಿ ಪಾರ್ವತಮ್ಮ ನವರುಮಹಿಳೆಯ ಸಾಧನೆಯ ಹಿಂದೆ ಪುರುಷರ ಬೆಂಬಲ, ಪ್ರೋತ್ಸಾಹ ಮತ್ತು ಸಹಭಾಗಿತ್ವವು ಮಹತ್ವದ ಪಾತ್ರ ವಹಿಸುತ್ತದೆ. “ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುವಂತೆ, ಯಶಸ್ವಿ ಮಹಿಳೆಯ ಹಿಂದೆ ಪುರುಷನ ಬೆಂಬಲವೂ ಇರುತ್ತದೆ” ಎಂಬ ಮಾತು ಸಮಾಜದಲ್ಲಿನ ಸಮಾನತೆ ಮತ್ತು ಪರಸ್ಪರ ಸಹಕಾರವನ್ನು ಎತ್ತಿ ಹಿಡಿಯುತ್ತದೆ. ಪತಿ, ತಂದೆ ಅಥವಾ ಸಹೋದರರ ಬೆಂಬಲವು ಮಹಿಳೆಯರ ಕನಸುಗಳನ್ನು ನನಸಾಗಿಸಲು ನೆರವಾಗುತ್ತದೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರಶೇಖರ್ ಅವರ ಮಹಿಳಾ ಸಾಧಕಿಯರ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಪ್ರಶಾಂತ ಕುಬಸದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಿಳಾ ಶಿಕ್ಷಕಿಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕು . ಚಿರಂಜೀವಿ ಪ್ರಾರ್ಥಿಸಿ, ಶಿಕ್ಷಕರಾದ ಎಂ.ಜಿ. ಚಂದನ ಸ್ವಾಗತಿಸಿ, ಪರಮೇಶ್ ನಾಯಕ್ ವಂದಿಸಿ, ನಿಂಗಪ್ಪ.ಡಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















