ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕುವೆಂಪು ವಿಶ್ವವಿದ್ಯಾಲಯ #KuvempuUniversity ಮಟ್ಟದ ಬಿಎಸ್ಸಿ ಹಾಗೂ ಎಂಕಾಂ ವಿಭಾಗದಲ್ಲಿ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿದ್ದಾರೆ.
2024 ಸಾಲಿನ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಬಿಎಸ್ಸಿ ಹಾಗೂ ಎಂಕಾಂ ವಿಭಾಗದ ರ‍್ಯಾಂಕ್ ಪಟ್ಟಿ ಪ್ರಕಟವಾಗಿದೆ.
Also Read>> ತಮಿಳುನಾಡಿನಲ್ಲಿ ಮದ್ಯ ಮಾರಾಟ, ಖರೀದಿಗೆ ವಯೋಮಿತಿ ನಿಗದಿ | ಎಷ್ಟು ವರ್ಷ?
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ #KumadvathiDegreeCollege ಬಿಎಸ್ಸಿ ವಿಭಾಗದ ವಿದ್ಯಾರ್ಥಿ ಎಂ. ಪ್ರಮೋದ, ಶೇ. 97.29 ಅಂಕಗಳಿಸುವ ಮೂಲಕ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಹಾಗೂ ಎಂಕಾಂ ವಿಭಾಗದಲ್ಲಿ ಆರ್. ಸಿಂಧು ಅವರು ಶೇ. 7.36 ಅಂಕಗಳಿಸುವ ಮೂಲಕ ವಿಶ್ವವಿದ್ಯಾಲಯಕ್ಕೆ ಏಳನೇ ರ‍್ಯಾಂಕ್ ಪಡೆದಿದ್ದಾರೆ.
ರ‍್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು, ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ದೇಶದಲ್ಲೇ ಮೊದಲು | ಸ್ಥಳೀಯ ತಂತ್ರಜ್ಞಾನ ಆಧಾರಿತ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು




















