ಕಲ್ಪ ಮೀಡಿಯಾ ಹೌಸ್ | ಯಶವಂತಪುರ |
ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು, ಹುಬ್ಬಳ್ಳಿ ಬೈಪಾಸ್ ಮೂಲಕ ಯಶವಂತಪುರ ಮತ್ತು ವಿಜಯಪುರ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲನ್ನು ಓಡಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ South Western Railway ಮಾಹಿತಿ ನೀಡಿದ್ದು, ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
06577 ಸಂಖ್ಯೆಯ ಯಶವಂತಪುರ-ವಿಜಯಪುರ ವಿಶೇಷ ಎಕ್ಸ್’ಪ್ರೆಸ್ ರೈಲು Yashawanthapura-Vijayapura Special train 2026ರ ಮೇ 16 ರಿಂದ 27ರವರೆಗೆ ಪ್ರತಿ ಶನಿವಾರ 18:15 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ 5:15 ಗಂಟೆಗೆ ವಿಜಯಪುರ ತಲುಪಲಿದೆ.
Also read: ಬೆಂಗಳೂರು-ಹೌರಾ ಹಾಗೂ ಕಾಮಾಕ್ಯ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
ಹಿಂದಿರುಗುವ ಮಾರ್ಗದಲ್ಲಿ, 06578 ಸಂಖ್ಯೆಯ ವಿಜಯಪುರ-ಯಶವಂತಪುರ ವಿಶೇಷ ಎಕ್ಸ್’ಪ್ರೆಸ್ 17.05.2026 ರಿಂದ 28.06.2026ರವರೆಗೆ ಪ್ರತಿ ಭಾನುವಾರ 17:00 ಗಂಟೆಗೆ ವಿಜಯಪುರದಿಂದ ಹೊರಟು, ಮರುದಿನ 04:00 ಗಂಟೆಗೆ ಯಶವಂತಪುರ ತಲುಪಲಿದೆ.
ಮಾರ್ಗಮಧ್ಯೆ, ವಿಶೇಷ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್’ಎಂಎಂ ಹಾವೇರಿ, ಗದಗ ಬೈಪಾಸ್, ಬದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ವಿಶೇಷ ರೈಲು 19 ಐಸಿಎಫ್ ಬೋಗಿಗಳನ್ನು ಒಳಗೊಂಡಿದ್ದು, ಅದರಲ್ಲಿ 02 ಎಸಿ 2-ಟೈರ್, 04 ಎಸಿ 3-ಟೈರ್, 07 ಸ್ಲೀಪರ್ ಕ್ಲಾಸ್, 04 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ಯೊಂದಿಗೆ ದಿವ್ಯಾಂಗ ಸ್ನೇಹಿ ಬೋಗಿಗಳು ಒಳಗೊಂಡಿರುತ್ತವೆ. ಮೇಲಿನ ಅವಧಿಯಲ್ಲಿ, ಈ ವಿಶೇಷ ರೈಲು ಪ್ರತಿ ದಿಕ್ಕಿನಲ್ಲಿ 07 ಟ್ರಿಪ್’ಗಳನ್ನು ಸಂಚರಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















