ಕಲ್ಪ ಮೀಡಿಯಾ ಹೌಸ್ | ಸಾಗರ |
ತಾಲೂಕಿನ ಅವಿನಹಳ್ಳಿ ಹೋಬಳಿಯ ಕಾಗೆಹಳ್ಳ ಗ್ರಾಮದ ಸಮೀಪ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ರಸ್ತೆ ಅಪಘಾತ #RoadAccident ಸಂಭವಿಸಿದ್ದು, ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು ಕಂಡಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಅವಿನಹಳ್ಳಿ ಹೋಬಳಿಯ ಕುಂಬಾರಗೊಳ್ಳಿ ಗ್ರಾಮದ ನಿವಾಸಿ ಪ್ರೇಮ್ ಕುಮಾರ್ (25) ಎಂದು ಗುರುತಿಸಲಾಗಿದೆ.
Also Read>> ಶಿವಮೊಗ್ಗ | ಮೇ 16-24 | ರಾಜ್ಯಮಟ್ಟದ ಅಂತರ್ ಜಿಲ್ಲಾ ಫುಟ್‍ಬಾಲ್ ಲೀಗ್ | MLC ಡಾ.ಧನಂಜಯ ಸರ್ಜಿ
ಮೃತ ಪ್ರೇಮ್ ಕುಮಾರ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಇಂದು ಮಧ್ಯಾಹ್ನ ಸಾಗರ ನಗರದಲ್ಲಿ ಕೆಲಸ ಮುಗಿಸಿ ತಮ್ಮೂರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.
ಕಾಗೆಹಳ್ಳದ ಸಮೀಪ ಎದುರಿನಿಂದ ಬಂದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂದ್ದು, ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪ್ರೇಮ್ ಕುಮಾರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


ದೇಶದಲ್ಲೇ ಮೊದಲು | ಸ್ಥಳೀಯ ತಂತ್ರಜ್ಞಾನ ಆಧಾರಿತ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು


















