ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೆಸಿಇಟಿ ಪರೀಕ್ಷೆಯಲ್ಲಿ #Karkala ಕಾರ್ಕಳದ ಕ್ರೆಸ್ಟ್‌ಕಿಂಗ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
ಈ ಬಾರಿ ಕಾಲೇಜಿನ ಒಟ್ಟು 152 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ ಬಹುತೇಕರು ಉತ್ತಮ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. ವಿಶೇಷವಾಗಿ, ಅಗ್ರ 20,000 ರೊಳಗೆ 129 ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದು ಸಂಸ್ಥೆಯ ಸಾಧನೆಯಾಗಿದೆ.
Also Read>> ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಟ: ಮೂವರು ಯುವಕರು ಪೊಲೀಸರ ವಶಕ್ಕೆ
ಅಗ್ರ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳು
- ವಿಜೇತ್ ಶೆಟ್ಟಿಗಾರ್ – 236ನೇ ರ‍್ಯಾಂಕ್
- ಸುಮಂತ್ ಎನ್.ಕೆ. – 959ನೇ ರ‍್ಯಾಂಕ್
- ವಿಜೇತ್ ಆರ್ – 1020ನೇ ರ‍್ಯಾಂಕ್
- ಅಪೇಕ್ಷಾ ಜೈನ್ – 2144ನೇ ರ‍್ಯಾಂಕ್
- ದಿಶಾ ಡಿಮೆಲ್ಲೊ – 2148ನೇ ರ‍್ಯಾಂಕ್
- ಹೇಮಂತ್ ಗೌಡ – 2100ನೇ ರ‍್ಯಾಂಕ್
- ರೋಷನ್ ಥೋರಸ್ – 2176ನೇ ರ‍್ಯಾಂಕ್
- ಅನುಷ್ ಶೆಟ್ಟಿ – 2381ನೇ ರ‍್ಯಾಂಕ್
- ಸಿಯಾ ವೆನಿಶಾ ಡಿಸೋಜಾ – 3773ನೇ ರ‍್ಯಾಂಕ್
- ಸ್ಮೃತಿ ಮರಾಠೆ – 4094ನೇ ರ‍್ಯಾಂಕ್
ಒಟ್ಟಾರೆ ಸಾಧನೆ
- ಅಗ್ರ 500 ರೊಳಗೆ – 1 ವಿದ್ಯಾರ್ಥಿ
- ಅಗ್ರ 1000 ರೊಳಗೆ – 2 ವಿದ್ಯಾರ್ಥಿಗಳು
- ಅಗ್ರ 5000 ರೊಳಗೆ – 25 ವಿದ್ಯಾರ್ಥಿಗಳು
- ಅಗ್ರ 10,000 ರೊಳಗೆ – 63 ವಿದ್ಯಾರ್ಥಿಗಳು
- ಅಗ್ರ 15,000 ರೊಳಗೆ – 93 ವಿದ್ಯಾರ್ಥಿಗಳು
- ಅಗ್ರ 20,000 ರೊಳಗೆ – 129 ವಿದ್ಯಾರ್ಥಿಗಳು
ಸಂಸ್ಥೆಯ ಹೆಗ್ಗಳಿಕೆ
ವಿಜ್ಞಾನ ವಿಭಾಗದಲ್ಲಿ ಮಿತಿಯಿಲ್ಲದ ಅಂಕಗಳೊಂದಿಗೆ ವಿದ್ಯಾರ್ಥಿಗಳು ದಾಖಲಾತಿ ಪಡೆದು ಉತ್ತಮ ಫಲಿತಾಂಶ ತೋರಿರುವುದು ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ | ಪ್ರಧಾನಿ ಮೋದಿ ಭಾವುಕ ಮಾತು




















