ಕಲ್ಪ ಮೀಡಿಯಾ ಹೌಸ್ | ಸಾಗರ |
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದ್ದು, ಹಿನ್ನೀರಿನ ಪ್ರಮಾಣವೂ ಹೆಚ್ಚಿದ್ದರಿಂದ ಸಮೀಪದ ಹಲ್ಕೆ- ಮುಪ್ಪಾನೆ ಲಾಂಚ್ ಸೇವೆ ಪುನರಾರಂಭಗೊಂಡಿದೆ.
ಜಲಾಶಯದ ಹಿನ್ನೀರು ಕಡಿಮೆಯಾಗಿದ್ದರಿಂದ ಜೂನ್ ಆರಂಭದಲ್ಲಿ ಲಾಂಚ್ ಸೇವೆ ಸ್ಥಗಿತಗೊಳಿಸಲಾಗಿತ್ತು.

Also read: ಅಕ್ರಮ ತೂರಬಿಲ್ಲೆ ಜೂಜಾಟದ ಮೇಲೆ ಬಲೆ, ಮೂವರು ಅರೆಸ್ಟ್!
ಕಳೆದೊಂದು ವಾರದಿಂದ ಸಾಗರ, ಹೊಸನಗರ ತಾಲ್ಲೂಕು ಸೇರಿ ಮಲೆನಾಡಿನಲ್ಲಿ ಉತ್ತಮ ಮಳೆ ಸುರಿದ ಕಾರಣ ಶರಾವತಿ ಮೈದುಂಬಿದ್ದು, ಲಿಂಗನಮಕ್ಕಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಹಲ್ಕೆ- ಮುಪ್ಪಾನೆ ನಡುವಿನ ಲಾಂಚ್ ಸೇವೆ ಆರಂಭವಾಗಿದೆ ಎಂದು ಲಾಂಚ್ ನಿರೀಕ್ಷಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









