ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ (Hubballi) ನಗರದ ಗದಗ ರಸ್ತೆಯ ಡೌನ್ ಚಾಳ ಕಾಲೋನಿಯ ಸಂತ ಶ್ರೀ ಸೇವಾಲಾಲ್ ಮಹಾರಾಜರ ದೇವಸ್ಥಾನದಲ್ಲಿ ಬಂಜಾರ ರೈಲ್ವೆ ನೌಕರರ ಕುಟುಂಬಸ್ಥರ ವತಿಯಿಂದ ಗಣೇಶ ಹಬ್ಬವನ್ನು (Ganesha Festival) ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ಆಚರಿಸಲಾಯಿತು.
ಹಬ್ಬದ ವಿಶೇಷ ದಿನದಂದು ದೇವಸ್ಥಾನದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಈ ಸಮಾರಂಭದಲ್ಲಿ ಬಂಜಾರ ರೈಲ್ವೆ ನೌಕರರ ಕುಟುಂಬದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಮುದಾಯದ ನೂರಾರು ಜನ ಭಾಗವಹಿಸಿ ಹಬ್ಬದ ಮೆರಗನ್ನು ಹೆಚ್ಚಿಸಿದರು.
ಕಾರ್ಯಕ್ರಮದ ಅಂಗವಾಗಿ ನೆರೆದಿದ್ದ ಎಲ್ಲರಿಗೂ ವಿಶೇಷ ಮನರಂಜನಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಸಂಭ್ರಮ ಆಯೋಜಿಸಲಾಗಿತ್ತು.
Also Read>> ಆಗ್ನೇಯ ಬೆಂಗಳೂರಿನ ಆರೋಗ್ಯ ಕ್ಷೇತ್ರಕ್ಕೆ ಬಲ | ಸರ್ಜಾಪುರದ ಸ್ಪರ್ಶ್ ಆಸ್ಪತ್ರೆಗೆ 1ನೇ ವಾರ್ಷಿಕೋತ್ಸವ
ಧಾರ್ಮಿಕ ವಿಧಿವಿಧಾನಗಳ ನಂತರ ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೆ ಮತ್ತು ಕುಟುಂಬಸ್ಥರಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಎಲ್ಲರೂ ಒಟ್ಟಾಗಿ ಮಹಾಪ್ರಸಾದ ಸವಿದು ಹಬ್ಬದ ಸಂತಸವನ್ನು ಹಂಚಿಕೊಂಡರು.
ಪೂಜೆ, ಮನರಂಜನೆ ಹಾಗೂ ಪ್ರಸಾದ ಸ್ವೀಕಾರದ ಬಳಿಕ ಸಂಪ್ರದಾಯಬದ್ಧವಾಗಿ ಗಣಪತಿಯ ವಿಸರ್ಜನಾ ಕಾರ್ಯಕ್ರಮವನ್ನು ಅಂದೇ ಅತ್ಯಂತ ಶ್ರದ್ಧೆಯಿಂದ ನೆರವೇರಿಸಲಾಯಿತು. ಈ ಸಮಾರಂಭದಿಂದ ದೇವಸ್ಥಾನದಲ್ಲಿ ಹಬ್ಬದ ಕಳೆ ಕಟ್ಟಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









