ಭದ್ರಾವತಿ: ಹೊಸಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದು ಮಹಾಸಭಾ ಗಣಪತಿ ಸನ್ನಿಧಿಯಲ್ಲಿ ಇಂದು ಆಯೋಜಿಸಲಾಗಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಭಾಷಣ ರದ್ದಾಗಿದೆ.
ಈ ಕುರಿತಂತೆ ಪ್ರಮೋದ್ ಮುತಾಲಿಕ್ ಶಿವಮೊಗ್ಗ ಜಿಲ್ಲಾ ಗಡಿ ಪ್ರವೇಶಿಸದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅವರ ದಿಕ್ಸೂಚಿ ಭಾಷಣ ರದ್ದಾಗಿದೆ.
ಪ್ರಮೋದ್ ಮುತಾಲಿಕ್ ಬದಲಾಗಿ ಸಾಗರದ ಪ್ರಸಿದ್ದ ವಾಗ್ಮಿ ಶ್ರೀಕಾಂತ್ ಭಟ್ ಅವರು ಇಂದು ಮುಖ್ಯ ಭಾಷಣ ಮಾಡಲಿದ್ದು, ಉಳಿದಂತೆ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ.















