ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ನಟೋರಿಯಸ್ ಉಗ್ರ ಹಿಜ್ಬುಲ್ ಮುಜಾಹಿದ್ದೀನ್ ಸ್ಥಳೀಯ ಕಮಾಂಡರ್ ರಿಯಾಜ್ ನೈಕೋನನಲ್ಲಿ ಬಲಿ ಹಾಕಿದ ಬೆನ್ನಲ್ಲೇ, ಟಾಪ್ 10 ಮೋಸ್ಟ್ ವಾಂಟೆಡ್ ಉಗ್ರರನ್ನು ಬೇಟೆಯಾಡಲು ಭಾರತೀಯ ಸೇನೆ ಸಿದ್ದವಾಗಿ, ಕಾರ್ಯಾಚರಣೆ ಆರಂಭಿಸಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವಿವರ ಪ್ರಕಟಿಸಿದ್ದು, ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಟಾಪ್ 10 ಮೋಸ್ಟ್ ವಾಂಟೆಂಡ್ ಉಗ್ರರ ಪಟ್ಟಿ ಬಿಡುಗಡೆ ಮಾಡಿದ್ದು, ಇವರನ್ನೆಲ್ಲಾ ಬೇಟೆಯಾಡುವ ಕಾರ್ಯಾಚರಣೆಯನ್ನು ಯೋಧರು ಆರಂಭಿಸಿದ್ದಾರೆ.
1) ಹೊಸ ಹಿಜ್ಬುಲ್ ಕಮಾಂಡರ್ ಡಾ. ಸೈಫುಲ್ಲಾ, ಕೋಡ್ ಹೆಸರು ಗಾಜಿ ಹೈದರ್ ಅಥವಾ ವೈದ್ಯ ಸಾಹಿಬ್. ಅಕ್ಟೋಬರ್ 2014 ರಲ್ಲಿ ಹಿಜ್ಬುಲ್-
ಮುಜಾಹಿದ್ದೀನ್’ಗೆ ಸೇರಿದನು.
2) ಮೊಹಮ್ಮದ್ ಅಶ್ರಫ್ ಖಾನ್, ಕೋಡ್ ಹೆಸರು ಅಶ್ರಫ್ ಮೊಲ್ವಿ ಮನ್ಸೂರ್-ಉಲ್-ಇಸ್ಲಾಂ. ಸೆಪ್ಟೆಂಬರ್ 9, 2016 ರಂದು ಎಚ್‌ಎಂಗೆ ಸೇರಿದ್ದಾನೆ.
3) ಜುನೈದ್ ಸೆಹ್ರಾಯ್ (ಎಚ್‌ಎಂ); 4) ಮೊಹ್ಮ್ ಅಬ್ಬಾಸ್ ಶೇಖ್, ಕೋಡ್ ಹೆಸರು ತುರಾಬಿ ಮೌಲ್ವಿ, 3 ಮಾರ್ಚ್ 2015 ರಿಂದ ಸಕ್ರಿಯವಾಗಿದ್ದು ಮತ್ತು
ಎಚ್‌ಎಂಗೆ ಸಂಯೋಜಿತವಾಗಿದ್ದಾನೆ.
5) 2014 ರ ಕೊನೆಯಲ್ಲಿ ಜೈಷ್-ಎ-ಮೊಹಮ್ಮದ್‌ಗೆ ಸೇರಿದ ಜಾಹಿದ್ ಜಗರ್ರ
6) ಶಕುರ್ 2015 ರಿಂದ ಎಲ್‌ಇಟಿಗೆ ಸಂಪರ್ಕ ಹೊಂದಿದ್ದಾನೆ
7) 2015 ರಲ್ಲಿ ಜೈಷ್ ಸೇರಿದ + ವರ್ಗದ ಭಯೋತ್ಪಾದಕ ಫೈಸಲ್ ಭಾಯ್
8) ಶೆರಾಜ್ ಅಲ್ ಲೋನ್, ಕೋಡ್ ಹೆಸರು ಮೌಲ್ವಿ
9) ಸಲೀಂ ಪಾರೆ ಜೆಎಂಗೆ ಸಂಪರ್ಕ ಹೊಂದಿದ್ದಾನೆ
10) ಓವೈಸ್ ಮುಲ್ಲಿಕ್, ಎಲ್‌ಇಟಿಗೆ ಸಂಬಂಧ ಹೊಂದಿದ್ದಾನೆ.
Get in Touch With Us info@kalpa.news Whatsapp: 9481252093
















