ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮನೆಯ ಆವರಣದಲ್ಲಿ 10 ಕೆಜಿ ಗಾಂಜ ಬೆಳೆದಿದ್ದ ಮೂವರು ಆರೋಪಿಗಳ ಪೈಕಿ ಗ್ರಾಮಾಂತರ ಪೋಲಿಸರು ಓರ್ವನನ್ನು ಬಂಧಿಸಿ ಗಾಂಜವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ಶುಕ್ರವಾರ ಕೂಡ್ಲಿಗೆರೆ ಗ್ರಾಮದಲ್ಲಿ ನಡೆದಿದೆ.
ಕೂಡ್ಲಿಗೆರೆ ಗ್ರಾಮದ ನಿವಾಸಿ ಯುವರಾಜ್’ಯಿವರ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಸುಮಾರು ರೂ.20500 ಮೌಲ್ಯದ 10 ಕೆಜಿ ಗಾಂಜಾ ಗಿಡಗಳನ್ನು ಮಾರಾಟ ಮಾಡಿ ಲಾಭಗಳಿಸುವ ಉದ್ಧೇಶದಿಂದ ಬೆಳೆಯಲಾಗಿದೆ ಎಂಬಮಾಹಿತಿ ಪಡೆದ ಗ್ರಾಮಾಂತರ ಪೋಲಿಸರು ಶುಕ್ರವಾರ ಆರೋಪಿಗಳ ಮನೆಯ ಹಿಂಭಾಗದ ಜಾಗದ ಮೇಲೆ ದಾಳಿ ನಡೆಸಿ 10 ಕೆಜಿ ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಆರೋಪಿ ಯುವರಾಜ್’ನನ್ನು ಬಂಧಿಸಿದ್ದು, ಉಳಿದ ಆರೋಪಿಗಳಾದ ಚಿನ್ನತಂಬಿ ಮತ್ತು ವೆಳ್ಳಿಯಮ್ಮ ತಲೆಮರೆಸಿಕೊಂಡಿರುತ್ತಾರೆ.
Get In Touch With Us info@kalpa.news Whatsapp: 9481252093
Discussion about this post