ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭದ್ರಾ ಜಲಾಶಯ ತುಂಬಲು ಇನ್ನು ಕೇವಲ 3.5 ಅಡಿಗಳಷ್ಟು ನೀರಿನ ಅಗತ್ಯವಿದ್ದು, ಇಂದಿನ ಮಟ್ಟ 182.5 ಅಡಿಗಳಾಗಿದೆ.
ಇಂದು ಮಧ್ಯಾಹ್ನದ ಮಾಹಿತಿಯಂತೆ, 186 ಅಡಿಗಳ ಗರಿಷ್ಠ ಸಾಮರ್ಥ್ಯ ಅಣೆಕಟ್ಟೆಯಲ್ಲಿ 182.5 ಅಡಿಗಷ್ಟು ನೀರು ಸಂಗ್ರಹವಾಗಿದೆ.
ಇಂದಿನ ಸಾಮರ್ಥ್ಯ 67.091 ಟಿಎಂಸಿಗಳಾಗಿದ್ದು, ಒಟ್ಟು ಹರಿವು 2713 ಕ್ಯೂಸೆಕ್ಸ್ ಆಗಿದೆ.
ಸದ್ಯಕ್ಕೆ ಗೇಟ್ ತೆರೆದು ನೀರು ಬಿಡುವುದಿಲ್ಲ
186 ಅಡಿಗಳ ಗರಿಷ್ಠ ಸಾಮರ್ಥ್ಯದ ಅಣೆಕಟ್ಟೆಯಲ್ಲಿ 185 ಅಡಿಗಳಷ್ಟು ಸಂಗ್ರಹವಾದ ನಂತರ ಗೇಟ್ ತೆರೆದು ನೀರನ್ನು ನದಿಗೆ ಹರಿಸಲಾಗುತ್ತದೆ. ಆದರೆ, ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾದ ಕಾರಣ ಒಳಹರಿವು ಕಡಿಮೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಕೇವಲ 7412 ಕ್ಯೂಸೆಕ್ಸ್ ನೀರು ಹರಿದುಬಂದಿದೆ. ಹೀಗಾಗಿ, ಜಲಾಶಯ ತುಂಬಲು 3.5 ಅಡಿಗಳು ಬಾಕಿಯಿದ್ದರೂ ಮಳೆ ಕಡಿಮೆಯಾದ ಕಾರಣ ನೀರು ಹರಿಸುವುದಿಲ್ಲ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ 185 ಅಡಿಗಳಷ್ಟು ನೀರು ಸಂಗ್ರಹವಾದ ನಂತರ ಹಿನ್ನೀರು ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದರೆ ಮಾತ್ರ ಗೇಟ್ ತೆರೆದು ನೀರು ಹರಿಸಲಾಗುತ್ತದೆ. ಒಂದು ವೇಳೆ 185 ಅಡಿಗಳು ತಲುಪಿದ ನಂತರ ಹಿನ್ನೀರು ಪ್ರದೇಶದಲ್ಲಿ ಮಳೆಯಾಗದೇ ಇದ್ದರೆ ನೀರು ಹರಿಸುವುದಿಲ್ಲ.
Get In Touch With Us info@kalpa.news Whatsapp: 9481252093
Discussion about this post