ಮುಂಬೈ, ಅ.4: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ತಮ್ಮ ಮೊಟ್ಟ ಮೊದಲ ಆರ್ಥಿಕ ನೀತಿಯನ್ನು ಪ್ರಕಟಿಸಿರುವ ಊರ್ಜಿತ್ ಪಟೇಲ್, ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿ, ಶೇ.6.25ಕ್ಕೆ ನಿಗದಿಪಡಿಸಿದ್ದಾರೆ.
ಈ ಕುರಿತಂತೆ ಪಟೇಲ್ ಇಂದು ಮಾಹಿತಿ ನೀಡಿದರು. ರಿವರ್ಸ್ ರೆಪೊ ದರವನ್ನು ದ್ರವ್ಯತೆ ಹೊಂದಾಣಿಕೆ ಸೌಲಭ್ಯ(ಎಲ್‌ಎಎಫ್) ಅಡಿ ಶೇಕಡಾ 5.75ಕ್ಕೆ ನಿಗದಿಪಡಿಸಿದೆ. ಕನಿಷ್ಠ ಸ್ಥಿರ ಸೌಲಭ್ಯ(ಎಮ್‌ಎಸ್‌ಎಫ್) ದರ ಕೂಡ ಶೇಕಡಾ 6.75 ಆಗಿದೆ. ಇದು 2010ರ ನಂತರ ರೆಪೊ ದರ ಅತ್ಯಂತ ಕನಿಷ್ಠವಾಗಿದೆ.
ರೆಪೋದರವನ್ನು ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಹಾಗೂ ವಾಹನ ಸಾಲದ ಮೇಲಿನ ಬಡ್ಡಿ ಅಗ್ಗವಾಗುವ ಸಾಧ್ಯತೆಯಗಳಿವೆ.
ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ವಿಧಿಸುವ ಬಡ್ಡಿಯೇ ರೆಪೊ ದರ. ಈಗ ಆರ್‌ಬಿಐ 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿರುವುದರಿಂದ ಬ್ಯಾಂಕುಗಳಿಗೆ ಆರ್‌ಬಿಐನಿಂದ ಸ್ವಲ್ಪ ಅಗ್ಗದ ದರದಲ್ಲಿ ಹಣಕಾಸು ಪೂರೈಕೆಯಾಗುತ್ತದೆ. ಹೀಗಾಗಿ ಗ್ರಾಹಕರಿಗೆ ಅಂದರೆ ಜನರಿಗೆ ಕಡಿಮೆ ಬಡ್ಡಿಗೆ ಗೃಹ, ವಾಹನ, ಕಾರ್ಪೊರೇಟ್ ಸಾಲಗಳು ದೊರಕುತ್ತವೆ.
Hero Motocorp Launches Glamour x With Integrated-ABS
Kalpa Media House | Bengaluru | Hero MotoCorp, the world's largest manufacturer of motorcycles and scooters, today announced the launch...
Read moreDetails




