ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಕನ್ನಡ ಸೇರಿದಂತೆ ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟಿ ಮೀನಾ Actress Meena ಅವರ ಪತಿ ವಿದ್ಯಾಸಾಗರ್ ಅವರು ಬುಧವಾರ ಮುಂಜಾನೆ ನಿಧನರಾಗಿದ್ದಾರೆ.
ಇತ್ತೀಚಿನ ಕೋವಿಡ್ -19 Covid-19 ಸೋಂಕಿನಿಂದ ವಿದ್ಯಾಸಾಗರ್ ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಮೀನಾ ಅವರ ಪತಿ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಹಿರಿಯ ನಟ ಶರತ್ ಕುಮಾರ್ ಸೇರಿದಂತೆ ಮೀನಾ ಅವರ ಸ್ನೇಹಿತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

,








Discussion about this post