ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ಇಲ್ಲಿನ ಅರಹತೊಳಲು ಕೈಮರದ ಜ್ಯುವೆಲರಿ ಅಂಗಡಿಯೊAದರಲ್ಲಿ ಗೋಡೆ ಕೊರೆದು ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳನ್ನು ಕಳುವು #Theft in jewelry shop ಮಾಡಿರುವ ಘಟನೆ ನಡೆದಿದೆ.
ಇಲ್ಲಿನ ಮಲ್ಲೇಶಪ್ಪ ವಾಣಿಜ್ಯ ಮಳಿಗೆಯಲ್ಲಿರುವ ಜ್ಯುವೆಲರಿ ಅಂಗಡಿ ಹಾಗೂ ಎಲೆಕ್ಟಿçಕ್ ಅಂಗಡಿಯಲ್ಲೂ ಸಹ ಕಳ್ಳತನ ಮಾಡಲಾಗಿದೆ.
ಗೋಡೆ ಕೊರೆದು ಜ್ಯುವೆಲರಿ ಅಂಗಡಿಗೆ ಕನ್ನ ಹಾಕಿರುವ ಖದೀಮರು 150 ಗ್ರಾಂ ಬಂಗಾರ ಹಾಗೂ ವಜ್ರದ ಆಭರಣಗಳು ಹಾಗೂ 5 ಕೆಜಿ ಬೆಳ್ಳಿ ಆಭರಣಗಳನ್ನು ದೋಚಲಾಗಿದೆ. ಅಂದಾಜು 18 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಹೇಳಲಾಗಿದೆ.
ಇನ್ನು, ಇಲ್ಲೇ ಇರುವ ಎಲೆಕ್ಟಿçಕಲ್ ಅಂಗಡಿಯ ರೋಲಿಂಗ್ ಶೆಟರ್ ಮುರಿದು ನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ 5 ಲಕ್ಷ ನಗದು ದೋಚಿಸಿದ್ದಾರೆ.
ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















