No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕನ್ನಡ ಭಾಷೆಯನ್ನೇ ಪ್ರಧಾನವನ್ನಾಗಿಸುವ ಗಂಭೀರ ಚಿಂತನೆ ಅಗತ್ಯ: ವಿಪ ಸಭಾಪತಿ ಬಸವರಾಜ ಹೊರಟ್ಟಿ

ಅಮೇರಿಕಾದ ರಿಚ್ಮಂಡ್ ನಗರದಲ್ಲಿ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ

kalpa News by kalpa News
September 2, 2024
in Special Articles
0
ಕನ್ನಡ ಭಾಷೆಯನ್ನೇ ಪ್ರಧಾನವನ್ನಾಗಿಸುವ ಗಂಭೀರ ಚಿಂತನೆ ಅಗತ್ಯ: ವಿಪ ಸಭಾಪತಿ ಬಸವರಾಜ ಹೊರಟ್ಟಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ವರದಿ  |

ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಪರಿವರ್ತಿಸಿ ಉದ್ಯೋಗ ಹಾಗೂ ಇತರ ಕಾರಣಗಳಿಗೆ ಕನ್ನಡ ಭಾಷೆಯನ್ನೇ ಪ್ರಧಾನವನ್ನಾಗಿಸುವ ಸವಾಲು ನಮ್ಮ ಮುಂದಿದ್ದು, ಅದನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲರೂ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ  #Basavaraja Horatti ಕರೆ ನೀಡಿದ್ದಾರೆ.

ಅಮೇರಿಕಾ ದೇಶದ ವರ್ಜೀನಿಯಾ ರಾಜ್ಯದ ರಾಜಧಾನಿಯಾಗಿರುವ ರಿಚ್ಮಂಡ್ ನಗರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ #12th Akka World Conference in America ಭಾಗವಹಿಸಿ ಮಾತನಾಡಿದ ಅವರು, ಇಂದು ವ್ಯವಹಾರಿಕವಾಗಿ ಕನ್ನಡ ಬಳಸುವುದನ್ನು ಕಡಿಮೆ ಮಾಡುತ್ತಿದ್ದು, ಉದ್ಯೋಗ ಹಾಗೂ ಇತರೆ ಕಾರಣಗಳಿಗಾಗಿ ಬಹುತೇಕ ಜನರು ಆಂಗ್ಲ ಭಾಷೆಯನ್ನೇ ಬಳಸುತ್ತಿದ್ದಾರೆ. ಹೀಗಾಗಿ ಕನ್ನಡ ಭಾಷೆಯಲ್ಲಿಯೇ ಕಲಿತರೂ ಸೂಕ್ತ ಉದ್ಯೋಗ ದೊರೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದರು.
ಪ್ರಪಂಚದಲ್ಲಿ ಅದೆಷ್ಟೋ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಅಂತೆಯೇ ಕನ್ನಡವೂ ಸಹ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗುತ್ತಿದೆ ಎನ್ನುವ ಹೇಳಿಕೆಗಳನ್ನು ಅಲ್ಲಗಳೆಯಲಾರದ ಸ್ಥಿತಿ ಇಂದು ನಿರ್ಮಾಣವಾಗಿದೆ. ಇಂದಿನ ಜಾಗತಿಕ ಪೈಪೋಟಿಯ ಭರಾಟೆಯಲ್ಲಿ ನಮ್ಮ ಮಾತೃ ಭಾಷೆಯನ್ನು ಮರೆತು ಅನ್ಯ ಭಾಷೆಗೆ ಜೋತು ಬೀಳುವ ವಾತಾವರಣ ಇಂದು ಎಲ್ಲೆಡೆ ಕಾಣಸಿಗುತ್ತಿರುವುದು ದುರ್ದೈವದ ಸಂಗತಿ ಎಂದರು.

Also read: ಜ್ಞಾನದ ಹಸಿವು ಇರುವವರಿಗೆ ದೇವರ ಅನುಗ್ರಹ ಸದಾ ಲಭ್ಯ | ಸೋಸಲೆ ಸ್ವಾಮೀಜಿ ಅಭಿಮತ

ಕನ್ನಡ, ಕನ್ನಡಿಗ ಹಾಗೂ ಕರ್ನಾಟಕತ್ವದ ಅಸ್ತಿತ್ವಕ್ಕಾಗಿ “ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್, ಡೆಪ್ಯೂಟಿ ಚನ್ನಬಸಪ್ಪ ಮತ್ತಿತರ ಮಹಾನ್ ಪುರುಷರು ಕನ್ನಡ ಪ್ರಜ್ಞೆಯನ್ನು ಉಳಿಸಿ, ಬೆಳೆಸಿ ಕನ್ನಡದ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸಿ ಚಲುವ ಕನ್ನಡ ನಾಡನ್ನು ಕಟ್ಟಲು ಶ್ರಮಿಸಿದ ಇತಿಹಾಸ ನಾವೆಲ್ಲರೂ ಇಂದು ಅರಿಯಬೇಕಿದೆ. ಕನ್ನಡದ ರಕ್ಷಣೆ ಕೇವಲ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಹಳ್ಳಿಗರಿಂದ ಎಂಬ ಮಾತು ಇಂದು ಸತ್ಯವಾಗುತ್ತಿದ್ದು, ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಓದಿದ ಹಾಗೂ ಓದುತ್ತಿರುವವರಿಂದ ಕನ್ನಡದ ಬಗೆಗಿನ ಅಸಡ್ಡೆ ಕಂಡು ಬರುತ್ತಿರುವುದು ದುರದೃಷ್ಠಕರ ಸಂಗತಿಯಾಗಿದೆ ಎಂದು ಹೊರಟ್ಟಿ ನುಡಿದರು.

ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು, ಭಾಷೆ ಉಳಿಯಬೇಕೆಂದರೆ ನಾವು ಪಡೆದುಕೊಂಡ ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡಬೇಕು. ನಮ್ಮ ಅದ್ಯತೆಯ ಭಾಷೆ ಮೊದಲು ಕನ್ನಡವಾಗಿ ನಂತರ ಇತರ ಭಾಷೆಗಳಾಗಿರಬೇಕು. ಕನ್ನಡದಲ್ಲಿ ಲಭ್ಯವಿಲ್ಲದ್ದನ್ನು ಲಭ್ಯ ಮಾಡಿಕೊಂಡು ಅದನ್ನು ಎಲ್ಲರಿಗೂ ತಲುಪಿಸುವ ಮೂಲಕ ನಮ್ಮ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಬೇರೆ ಭಾಷೆಗಳನ್ನು ಗೌರವಿಸಬೇಕು, ಕಲಿಯಬೇಕು, ಆದರೆ ನಮ್ಮ ಕನ್ನಡವನ್ನು ಸಾಂಸ್ಕೃತಿವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕಿದೆ ಎಂದರು.

ಕನ್ನಡ ತಾಯಿ ಕರ್ನಾಟಕದಲ್ಲಿ ಕಳೆದು ಹೋಗದಂತೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಿ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಗಳ ಉಳಿವಿಗಾಗಿ ಶ್ರಮಿಸಬೇಕು, ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಸಹ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದೆ, ಇದರ ಕಟ್ಟುನಿಟ್ಟಿನ ಪಾಲನೆಯಾಗುವತ್ತ ಕರ್ನಾಟಕ ಸರ್ಕಾರ ಹಾಗೂ ಅಧಿಕಾರಿಗಳು ಸಹ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಬಸವರಾಜ ಹೊರಟ್ಟಿ ನುಡಿದರು.

http://kalpa.news/wp-content/uploads/2024/04/VID-20240426-WA0008.mp4

ಜಗತ್ತಿನೆಲ್ಲೆಡೆ ಇರುವ ಕನ್ನಡಿಗರು ಎಂದೆಂದಿಗೂ ಕನ್ನಡಿಗರಾಗಿ ಉಳಿದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಸಂಕಲ್ಪದ ಭಾಗವಾಗಿ ಇಂದಿನ ಅಕ್ಕ ಕನ್ನಡ ಸಮ್ಮೇಳನ ಅಮೇರಿಕಾದಲ್ಲಿ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಸವರಾಜ ಹೊರಟ್ಟಿ ಸಂತಸ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ, ಕರ್ನಾಟಕ ರಾಜ್ಯದ ಸಚಿವರು, ಶಾಸಕರು, ಕನ್ನಡನಾಡಿನ ಹಲವು ಪ್ರತಿಷ್ಠಿತ ಧಾರ್ಮಿಕ ಮಠಗಳ ಮಠಾಧೀಶರುಗಳು, ಸಾಹಿತಿಗಳು, ಚಿಂತಕರು ಸೇರಿದಂತೆ ಅಮೇರಿಕಾದ ವಿವಿಧ ಪ್ರದೇಶಗಳಲ್ಲಿರುವ ಕನ್ನಡಿಗರು ಪಾಲ್ಗೊಂಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news                                  

Tags: #12th Akka World Conference in America12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನBasavaraja horattiKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_Kannadaಬಸವರಾಜ ಹೊರಟ್ಟಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜ್ಞಾನದ ಹಸಿವು ಇರುವವರಿಗೆ ದೇವರ ಅನುಗ್ರಹ ಸದಾ ಲಭ್ಯ | ಸೋಸಲೆ ಸ್ವಾಮೀಜಿ ಅಭಿಮತ

Next Post

ತುಳುನಾಡಲ್ಲಿ ತೆಲುಗು ಸ್ಟಾರ್ | ನೀರಲ್ಲಿ ನಡೆದುಕೊಂಡು ತೆರಳಿ ಮೂಡುಗಲ್ಲು ದೇವರ ದರ್ಶನ ಪಡೆದ ಜೂ.ಎನ್’ಟಿಆರ್

kalpa News

kalpa News

Next Post
ತುಳುನಾಡಲ್ಲಿ ತೆಲುಗು ಸ್ಟಾರ್ | ನೀರಲ್ಲಿ ನಡೆದುಕೊಂಡು ತೆರಳಿ ಮೂಡುಗಲ್ಲು ದೇವರ ದರ್ಶನ ಪಡೆದ ಜೂ.ಎನ್’ಟಿಆರ್

ತುಳುನಾಡಲ್ಲಿ ತೆಲುಗು ಸ್ಟಾರ್ | ನೀರಲ್ಲಿ ನಡೆದುಕೊಂಡು ತೆರಳಿ ಮೂಡುಗಲ್ಲು ದೇವರ ದರ್ಶನ ಪಡೆದ ಜೂ.ಎನ್'ಟಿಆರ್

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL