ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಇಲ್ಲಿನ ರಹೀಂನಗರದ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿದ ಪೊಲೀಸರು ಗೋಮಾಂಸ ಸಹಿತ ಐವರನ್ನು ಬಂಧಿಸಲಾಗಿದೆ.
ರಹೀಂನಗರದ ಶಾದಿಮಹಾಲ್ ಮುಂಭಾಗ ಮತ್ತು ಹಿಂಭಾಗದ ಎರಡು ಖಾಸಗಿ ಮನೆಗಳಲ್ಲಿ ಅಕ್ರಮವಾಗಿ ಕಸಾಯಿಕಾನೆ ನಡೆಸುತ್ತಿದ್ದವರ ಮೇಲೆ ಬೆಂಗಳೂರಿನ ಗೌ ಗ್ಯಾನ್ ಸಂಸ್ಥೆ ಮತ್ತು ಪೊಲೀಸ್ ರವರು ದಾಳಿ ನಡೆಸಿದ್ದಾರೆ.
ಅಕ್ಬರ್ ಮತ್ತು ಇಬ್ಬರು ಪ್ರತ್ಯೇಕವಾಗಿ ಹಸುಗಳನ್ನು ತಂದು ಕತ್ತರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.
Also read: ನ್ಯಾ.ಮೋಹನ್ ದಾಸ್ ವರದಿಯನ್ನು ಜಾರಿಗೊಳಿಸಿ: ಚಳ್ಳಕೆರೆಯಲ್ಲಿ ಬೃಹತ್ ಪ್ರತಿಭಟನೆ
ಈ ವೇಳೆಯಲ್ಲಿ ಒಂದು ಜೀವಂತ ಎತ್ತು ಮತ್ತು ಸುಮಾರು ೩೦೦ ಕೆಜಿಯಷ್ಟು ಎತ್ತುಗಳ ಮಾಂಸ ದೊರಕಿದೆ. ಈ ಸಂದರ್ಭದಲ್ಲಿ ಯಾವುದೇ ಪರವಾನಿಗೆ ಇಲ್ಲದ್ದು ಕಂಡು ಬಂದಿದೆ. ಈ ಬಗ್ಗೆ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಕರಣ ಸಂಬಂಧ ಐದು ಜನರನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ತಕ್ಕಡಿ, ಚಾಕು ಮತ್ತಿರರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ದಾಳಿ ವೇಳೆ ಚಳ್ಳಕೆರೆ ಡಿವೈಎಸ್’ಪಿ ಕೆ.ವಿ. ಶ್ರೀಧರ್ ಪಿಎಸ್’ಐ ಕೆ. ಸತೀಶ್ ನಾಯ್ಕ್, ಗೌಗ್ಯಾನ್ (ಜಿಜಿ ಎಫ್) ಫೌಂಡೇಶನ್ ಸದಸ್ಯರು, ನಗರಸಭೆ ಆರೋಗ್ಯಾಧಿಕಾರಿ ಗಣೇಶ್, ಪಶುಸಂಗೋಪನ ವೈದ್ಯಾಧಿಕಾರಿಗಳು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post