ಕಲ್ಪ ಮೀಡಿಯಾ ಹೌಸ್ | ಧಾರವಾಡ |
ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಗೆ ರಾಷ್ಟ್ರಪತಿಗಳು ಆಗಮಿಸುವ ಸಂಭ್ರಮ ಒಂದೆಡೆಯಾದರೆ ಇದೇ ಸಂಸ್ಥೆಯಿಂದ ರಾಷ್ಟ್ರಪತಿಗಳ ಮೂಲ ರಾಜ್ಯವಾದ ಓರಿಸ್ಸಾದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿಅನುವಾದ ಮಾಡುವ ರೋಬೋಟ್ ಯಂತ್ರವನ್ನು ಸಿದ್ಧಪಡಿಸುತ್ತಿರುವುದು ನಾಡಿನ ಹೆಮ್ಮೆಯ ಸಂಗತಿಯಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು President Droupadi Murmu ಅವರು ಸೆಪ್ಟೆಂಬರ್ 26 ರಂದು ಮಧ್ಯಾಹ್ನ ಐಐಐಟಿ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಶುಭ ಸಂದರ್ಭದಲ್ಲಿಯೇ ಈ ಸಂಸ್ಥೆಯು ಉನ್ನತ ಮಟ್ಟದಲ್ಲಿ ತಯಾರಿಸುತ್ತಿರುವ ಹುಮುನೊಯ್ಡ ರೋಬೋಟ್ ಯಂತ್ರದ ಮಾಹಿತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲಿದೆ.

ಪ್ರಸ್ತುತ ಈ ರೋಬೋಟ್ ತಂತ್ರಜ್ಞಾನದಲ್ಲಿ ಬುಡಕಟ್ಟು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುವ ಮಾಹಿತಿಯ ಬುಡಕಟ್ಟಿನ ಭಾಷೆಯಲ್ಲಿ ದೊರೆಯಲಿದೆ. ಈ ಯೋಜನೆಯಲ್ಲಿ ಓರಿಸ್ಸಾದ ಕುಯಿ ಮತ್ತು ಮುಂಡಾರಿ ಭಾಷೆಗಳನ್ನು ಹಾಗೂ ಕರ್ನಾಟಕದ ಲಂಬಾಣಿ ಹಾಗೂ ಸೋಲಿಗ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಇಂಗ್ಲೀಷ್ ಭಾಷೆಯಿಂದ ಹೇಳಲ್ಪಟ್ಟ ಬುಡಕಟ್ಟಿನ ಭಾಷೆಗೂ ಹಾಗೂ ಬುಡಕಟ್ಟು ಭಾಷೆಯಿಂದ ಇಂಗ್ಲೀಷ್ ಭಾಷೆಗೂ ಸ್ಪಷ್ಟವಾಗಿ ಅನುವಾದ ಮಾಡಬಹುದಾದಂತಹ ತಂತ್ರಲಿಪಿಯನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಲಂಬಾಣಿ, ಸೋಲಿಗ ಮತ್ತು ಕುಯಿಗೆ ಪಠ್ಯದಿಂದ ಪಠ್ಯಕ್ಕೆ ಮಾತಿನ ಸಂಶ್ಲೇಷಣೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ದೀಪಕ್ ತಿಳಿಸಿದರು.

Also read: ಅ.30ರಂದು ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ: ಶಾಸಕ ಈಶ್ವರಪ್ಪ
ಧಾರವಾಡದ ಹೈದ್ರಾಬಾದ್ ಹಾಗೂ ಭೂವನೇಶ್ವರ ಐಐಟಿ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಡಾ.ಪ್ರಕಾಶ ಪವಾರ ಹಾಗೂ ಡಾ.ಸಿಬಾಶಂಕರಪಾಡಿ ತೊಡಗಿಸಿಕೊಂಡಿದ್ದಾರೆ. ನವದೆಹಲಿಯ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಥಮಿಕ ಹಂತವಾಗಿ 44.53 ಲಕ್ಷ ಅನುದಾನವನ್ನು ನೀಡಿದೆ.
ಸ್ವಯಂಚಾಲಿತ ಮಾನವರೂಪಿ ರೋಬೋಟ್: ವಯಸ್ಸಾಮ,ದ ಹಿರಿಯರ ಸೇವೆಗೆ ಅನುಕೂಲವಾಗುವ ದೃಷ್ಟಿಯಿಂದ ಸ್ವಯಂಚಾಲಿತ ಮಾನವರೂಪಿ ರೋಬೋಟ್‍ನ್ನು ಸಹ ಐಐಐಟಿ ಧಾರವಾಡದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಪ್ರಧಾನ ಪರೀಕ್ಷಕ ಡಾ.ಕೆ.ಟಿ.ದೀಪಕ್ ಅವರು ತಿಳಿಸಿದ್ದಾರೆ.

ಹೈದರಾಬಾದ್ ತಿಹಾನ್ ಐಐಟಿ ಏಜೆನ್ಸಿ ಮೂಲಕ ರೂ.70 ಲಕ್ಷಗಳ ಅನುದಾನದದಲ್ಲಿ ಸ್ವಯಂಚಾಲಿತ ಮಾನವರೂಪಿ ರೋಬೋಟ್ ತಯಾರಿಸಲಾಗುತ್ತಿದೆ. ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಪ್ರೊ.ಕವಿ ಮಹೇಶ್, ಡಾ.ರಾಜೇಂದ್ರ ಹೆಗಡಿ, ಡಾ.ಪವನ್ ಕುಮಾರ್ ಸಿ, ಡಾ.ರಮೇಶ ಆತೆ, ಡಾ.ಚಿನ್ಮಯಾನಂದ ಎ. ತೊಡಗಿಸಿಕೊಂಡಿದ್ದಾರೆ.
ಸಂಸ್ಥೆಗೆ ನಿನ್ನೆ ಭೇಟಿ ನೀಡಿದ ವಾರ್ತಾ ಇಲಾಖೆಯ ಜಿಲ್ಲಾ ವಾರ್ತಾಧಿಕಾರಿ ಮಂಜುನಾತ ಸುಳ್ಳೊಳ್ಳಿ ಹಾಗೂ ವಾರ್ತಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಡೊಳ್ಳಿನ ಅವರಿಗೆ ಸದರಿ ಸಂಶೋಧನಾ ವಿಷಯಗಳ ಬಗ್ಗೆ ಡಾ.ಕೆ.ಟಿ.ದೀಪಕ್ ಸವಿಸ್ತಾರವಾಗಿ ವಿವರಿಸಿದರು.











Discussion about this post