ವಾಷಿಂಗ್ಟನ್, ಸೆ.14: ನ್ಯೂಯಾರ್ಕ್ ನ ಅಮೆರಿಕಾ ಜಿಲ್ಲಾ ನ್ಯಾಯಾಲಯದ ಪೀಠಕ್ಕೆ ಅಟಾರ್ನಿಯಾಗಿ ಭಾರತ ಮೂಲದ ಮಹಿಳೆ ಡಯಾನೆ ಗುಜರಾತಿ ಅವರನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನೇಮಕ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ ಕೋರ್ಟ್ ಬೆಂಚ್ ಗೆ ಅಟಾರ್ನಿಯಾಗಿ ಡಯಾನೆ ಗುಜರಾತಿ ಅವರನ್ನು ನೇಮಕ ಮಾಡಲು ನನಗೆ ಸಂತಸವಾಗುತ್ತದೆ. ತಮ್ಮ ಈ ಹುದ್ದೆಯೊಂದಿಗೆ ಅವರು ಅಮೆರಿಕ ಜನತೆಗೆ ಉತ್ತಮ ಸೇವೆ ಸಲ್ಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ’ ಎಂದು ಒಬಾಮ ನಿನ್ನೆ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ನ್ಯೂಯಾರ್ಕ್ ನ ದಕ್ಷಿಣ ಜಿಲ್ಲೆಯಲ್ಲಿ 2012ರಿಂದ ಅಮೆರಿಕಾ ಅಟಾರ್ನಿ ಕಚೇರಿಯ ಅಪರಾಧ ನಿಯಂತ್ರಣ ವಿಭಾಗದ ಉಪಮುಖ್ಯಸ್ಥರಾಗಿ 47 ವರ್ಷದ ಗುಜರಾತಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಇವರು ನ್ಯೂಯಾರ್ಕ್ ನ ಪೂರ್ವ ಜಿಲ್ಲೆಯ ನ್ಯಾಯಾಲಯಕ್ಕೆ ಫೆಡರಲ್ ಜಡ್ಜ್(ಒಕ್ಕೂಟ ನ್ಯಾಯಮೂರ್ತಿ) ಆಗಿ ಸೇವೆ ಸಲ್ಲಿಸಲಿದ್ದಾರೆ.
Discussion about this post