ನವದೆಹಲಿ, ಅ.15: ಪ್ರಸಕ್ತ ವರ್ಷದಲ್ಲಿ 100 ಹುಲಿಗಳು ಸಾವನ್ನಪ್ಪಿರುವುದು ವರದಿಯಾಗಿದೆ.
ಕೇರಳದ ತ್ರಿಶೂರ್ ನಲ್ಲಿರುವ ಮೃಗಾಲಯದಲ್ಲಿ 7 ವರ್ಷದ ದುರ್ಗಾ ಹೆಸರಿನ ಹುಲಿ ಸಾಯುವ ಮೂಲಕ ಈವರೆಗೆ 100ನೇ ಹುಲಿ ಸಾವನ್ನಪ್ಪಿದೆ. ಈ ಮೂಲಕ ಹುಲಿ ಸಂತತಿಗಳು ಕ್ಷೀಣಗೊಳ್ಳುತ್ತಿರುವುದು ಆತಂಕಕ್ಕೀಡುಮಾಡಿದೆ.
ವನ್ಯಜೀವಿ ಸಂರಕ್ಷಣಾ ಸಂಸ್ಥೆ ನೀಡಿರುವ ಮಾಹಿತಿಯಂತೆ 2016 ರಲ್ಲಿ ದೇಶದಲ್ಲಿ 100 ಹುಲಿಗಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ.ಕೆಲವು ಅನಾರೋಗ್ಯದಿಂದ ಮೃತಪಟ್ಟರೆ, ಮತ್ತೆ ಕೆಲವು ಇತರೆ ಪ್ರಾಣಿಗಳೊಂದಿಗೆ ಸಂಘರ್ಷಕ್ಕಿಳಿದು ಸಾವನ್ನಪ್ಪಿವೆ. ಇವುಗಳಲ್ಲಿ 36 ಹುಲಿಗಳನ್ನು ಬೇಟೆಯಾಡಿ ಸಾಯಿಸಿಸಲಾಗಿದೆ ಎಂದು ಹೇಳಿದೆ.
2015 ರಲ್ಲಿ 91 ಹುಲಿಗಳನ್ನು ಇವೇ ಕಾರಣಗಳಿಂದ ಸತ್ತಿವೆ ಎಂದೂ ವರದಿಯಲ್ಲಿ ಹೇಳಿದೆ.
Discussion about this post