Read - < 1 minute
ಇಂಫಾಲ, ಅ.೬: ಸತತವಾಗಿ ೧೬ ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ದೇಶದ ಗಮನ ಸೆಳೆದಿರುವ ಇರೋಮ್ ಶರ್ಮಿಳಾ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಿದ್ದು, ಹೊಸ ರಾಜಕೀಯ ಪಕ್ಷವೊಂದನ್ನು ಸೃಜಿಸುವುದಾಗಿ ಘೋಷಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಕ್ಕಾಗಿ ಇರೋಮ್ ಶರ್ಮಿಳಾ ಅವರ ಮೆಲೆ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ದೋಷಮುಕ್ತರನ್ನಾಗಿಸಿತು. ಪ್ರಕರಣದಿಂದ ದೋಷಮುಕ್ತರಾದ ಬಳಿಕ ಈ ತಿಂಗಳು ಹೊಸ ಪಕ್ಷ ಪ್ರಾರಂಭಿಸುತ್ತಿರುವುದಾಗಿ ಕೋರ್ಟ್ ಆವರಣದಲ್ಲಿ ತಿಳಿಸಿದ್ದಾರೆ.
ಮುಂದಿನ ವರ್ಷ ಮಣಿಪುರದಲ್ಲಿ ಚುನಾವಣೆ ನಡೆಯಲಿದ್ದು, ಶರ್ಮಿಳಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಆ. ೯ ರಂದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಶರ್ಮಿಳಾ, ತಾವು ರಾಜಕೀಯಕ್ಕೆ ಪ್ರವೇಸಿಸಲು ಅಪೇಕ್ಷಿಸಿರುವುದಾಗಿ ತಿಳಿಸಿದ್ದರು.
Discussion about this post