ತಿರುವನಂತಪುರಂ, ಅ.8: ಇಲ್ಲಿನ ಖಾಸಗೀ ಟ್ರಸ್ಟ್ ಒಂದರ ಅಡಿಯಲ್ಲಿ ನಡೆಸಲಾಗುತ್ತಿರುವ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಇಸ್ಲಾಂಗೆ ಸೇರುವಂತೆ ಬೋಧನೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.
ಇಸ್ಲಾಂಗೆ ಸೇರಿದ ವಿವಾದಾತ್ಮಕ ಬೋಧಿಕ ಝಾಕಿರ್ ನಾಯಕ್‌ನ ಹಿಂಬಾಲರಿಗೆ ಸೇರಿದ್ದು ಎನ್ನಲಾದ ಶಾಲೆಯಲ್ಲಿ ವಿವಾದಾತ್ಮಕ ವಿಚಾರಗಳನ್ನು ಬೋಧಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ನಗರ ಪೊಲೀಸರು ಈ ಕುರಿತಂತೆ ನೊಟೀಸ್ ಜಾರಿ ಮಾಡಿದ್ದಾರೆ.
ಇಲ್ಲಿನ ಎರ್ನಾಕುಲಂನಲ್ಲಿರುವ ದಿ ಪೀಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿರುದ್ಧ ಈ ಆರೋಪ ಮಾಡಲಾಗಿದ್ದು, ಸ್ಥಳೀಯ ಪ್ರಭಾವಿ ಉದ್ಯಮಿಯೊಬ್ಬರಿಗೆ ಈ ಶಾಲೆ ಸೇರಿದ್ದು ಎನ್ನಲಾಗಿದೆ.
ಈ ಆರೋಪದ ಹಿನ್ನೆಲೆಯಲ್ಲಿ ಸ್ಕೂಲ್‌ನ ಪ್ರಿನ್ಸಿಪಾಲ್, ಆಡ್ಮಿನಿಸ್ಟ್ರೇಟರ್ ಹಾಗೂ ಮೂವರು ಟ್ರಸ್ಟಿಗಳ ವಿರುದ್ಧ ಐಪಿಸಿ ಸೆಕ್ಷನ್ ೧೫೩ಎ ಹಾಗೂ ೩೪ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿ ಈ ಶಾಲೆಯಲ್ಲಿ ಬೋಧನೆ ಮಾಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿದ್ದು, ಇಲ್ಲಿನ ಪಠ್ಯಗಳಲ್ಲಿ ವಿವಾದಾತ್ಮಕ ಗದ್ಯಗಳನ್ನು ಸೇರಿದಲಾಗಿದೆ ಎಂದು ದೂರಲಾಗಿದೆ. ಅಲ್ಲದೇ, ಇಲ್ಲಿನ ವಿದ್ಯಾರ್ಥಿಗಳಿಗೆ ಇಸ್ಲಾಂಗೆ ಸೇರುವಂತೆ ಹಾಗೂ ಇಸ್ಲಾಂಗಾಗಿ ಕೆಲಸ ಮಾಡುವಂತೆ ಮನವೊಲಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇಸ್ಲಾಂನ ವಿವಾದಾತ್ಮಕ ಪ್ರಚಾರಕ ಝಾಕಿರ್ ನಾಯಕ್ ಅವನ ಬೆಂಬಲಿಗರು ಈ ಶಾಲೆಯನ್ನು ನಡೆಸುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಅಲ್ಲದೇ, ಐಎಸ್‌ಐಎಸ್ ಉಗ್ರ ಸಂಘಟನೆಗೆ ಸೇರುವಂತೆ ಇಲ್ಲಿನ ಮಕ್ಕಳ ಮನಃಪರಿವರ್ತನೆ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಮಾಡಲಾಗಿದೆ.
ಕೇರಳ ೨೧ ಮಂದಿ ಐಎಸ್‌ಐಎಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂಬ ಸಂಶಯ ವ್ಯಕ್ತವಾಗಿರುವ ಬೆನ್ನಲ್ಲೇ, ಈ ಶಾಲೆಯಲ್ಲಿ ಪಿಆರ್‌ಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಬ್ದುಲ್ ರಶೀದ್ ಸಹ ಇದರಲ್ಲಿ ಸೇರಿದ್ದಾನೆ ಎಂದು ಹೇಳಲಾಗಿದೆ.
ಇದೇ ವೇಳೆ ಐಎಸ್‌ಐಎಸ್ ಉಗ್ರ ಸಂಘಟನೆಯೊಂದಿಗೆ ನಂಟನ್ನು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಕೇರಳದ ಈ ಭಾಗದಲ್ಲಿ ಆರು ಮಂದಿಯನ್ನು ಬಂಧಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
Discussion about this post