ಇಸ್ಲಾಮಾಬಾದ್, ಅ.25: ಉಗ್ರಗಾಮಿಗಳಿಗೆ ಸೇರಿದ್ದು ಎಂದು ಅನುಮಾನ ವ್ಯಕ್ತಪಡಿಸಲಾಗಿರುವ ಸುಮಾರು 5,100 ಬ್ಯಾಂಕ್ ಖಾತೆಗಳನ್ನು ಪಾಕಿಸ್ಥಾನ ಸರ್ಕಾರ ವಶಪಡಿಸಿಕೊಂಡಿದ್ದು, ಇದರಲ್ಲಿ ಒಟ್ಟು ಮೊತ್ತು ಸುಮಾರು 400 ಮಿಲಿಯನ್ ಎಂದು ಅಂದಾಜಿಸಲಾಗಿದೆ.
ಪ್ರಮುಖವಾಗಿ, ಪಠಾಣ್ ಕೋಟ್ ದಾಳಿ ರೂವಾರಿ ಜೈಷ್ ಎ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಗೂ ಸೇರಿದ ಭಾರೀ ಮೊತ್ತದ ಖಾತೆಯೂ ಇದರಲ್ಲಿ ಸೇರಿದೆ ಎಂದು ಹೇಳಲಾಗಿದೆ. ಪ್ರಸ್ತುತ ಮಸೂದ್ ಕಸ್ಟಡಿಯಲ್ಲಿದ್ದಾನೆ.
ಈ ಕುರಿತಂತೆ ಮಾತನಾಡಿರುವ ಪಾಕ್ ಆಂತರಿಕ ವ್ಯವಹಾರಗಳ ವಕ್ತಾರರು, ಅಲ್ಲಾ ಬಕ್ಷ್ ನ ಪುತ್ರ ಮಸೂದ್ ಅಜರ್ ಗೆ ಸೇರಿದೆ ಎಂದು ಶಂಕಿಸಲಾಗಿರುವ ಬ್ಯಾಂಕ್ ಖಾತೆ ಸೇರಿದಂತೆ ಸುಮಾರು ಖಾತೆಗಳನ್ನು ನಾವು ವಶಪಡಿಸಿಕೊಂಡಿದ್ದು, ಈ ಎಲ್ಲಾ ಖಾತೆಗಳೂ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ಥಾನದಲ್ಲಿದ್ದವು ಎಂದಿದ್ದಾರೆ.
ಈಗ ವಶಪಡಿಸಿಕೊಂಡಿರುವ ಬ್ಯಾಂಕ್ ಖಾತೆಗಳಲ್ಲಿ ಕಿಂಗ್ ಪಿನ್ ಉಗ್ರರಿಗೂ ಸೇರಿದ ಹಲವು ಖಾತೆಗಳಿದ್ದು, ಸುಮಾರು ಸಾವಿರಕ್ಕೂ ಅಧಿಕ ಖಾತೆಗಳಿಗೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಎಸ್ ಬಿಪಿ ಬ್ಯಾಂಕ್ ನಿಂದ ಸುಮಾರು 1200 ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವೆಲ್ಲವೂ ಉಗ್ರರಿಗೆ ಸೇರಿದ್ದು ಎಂದು ಶಂಕಿಸಲಾಗಿದ್ದು, ಈ ಕುರಿತಂತೆ ತನಿಖೆ ಮುಂದುವರೆದಿದೆ. ಆ್ಯಂಟಿ ಟೆರರಿಸಂ ಆಕ್ಟ್, 1997ರ ಅನ್ವಯ ಎ ವರ್ಗದಲ್ಲಿ ಬರುವ ಉಗ್ರರ ಖಾತೆಗಳು ಇದರಲ್ಲಿವೆ ಎಂದು ಶಂಕಿಸಲಾಗಿದೆ.
ಆದರೆ, ಮತ್ತೊಂದು ವರದಿಯ ಪ್ರಕಾರ ಸುಮಾರು 5 ಸಾವಿರ ಬ್ಯಾಂಕ್ ಖಾತೆಗಳನ್ನು ಪಾಕ್ ವಶಪಡಿಸಿಕೊಂಡಿದೆ ಎಂದು ಹೇಳಲಾಗಿದ್ದು, ಇವೆಲ್ಲವೂ ಉಗ್ರರಿಗೆ ಸೇರಿದ್ದು ಎಂದು ಹೇಳಲಾಗಿದೆ.
ಮಸೂದ್ ಅಜರ್ ಹೆಸರು ಈ ಕಾಯ್ದೆಯ ನಾಲ್ಕನೆಯ ಶೆಡ್ಯೂಲ್ ಅಡಿಯಲ್ಲಿ ಎ ದರ್ಜೆಯಲ್ಲಿದೆ ಎಂದು ಪಾಕ್ ವಕ್ತಾರರು ಹೇಳಿದ್ದಾರೆ.
ಪಠಾಣ್ ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆದ ನಂತರ, ಈ ದಾಳಿ ರೂವಾರಿ ಮಸೂದ್ ಅಜರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಒತ್ತಡ ಹೇರಿತ್ತು. ಇದಕ್ಕಾಗಿ ಮಸೂದ್ ನನ್ನು ಬಂಧಿಸುವಂತೆ ವಿಶ್ವಸಂಸ್ಥೆ ಪಾಕ್ ಗೆ ಸೂಚನೆ ನೀಡಿತ್ತು.
ಮುಟ್ಟುಗೋಲು ಹಾಕಿಕೊಂಡಿರುವ ಖಾತೆಗಳಲ್ಲಿ ಸುಮಾರು 3,078 ಖಾತೆಗಳು ಖೈಬರ್ ಪಖ್ಟುಖವಾ ಹಾಗೂ ಫಟಾಗೆ ಶಾಖೆಯಲ್ಲಿ, ಸುಮಾರು 1443 ಖಾತೆಗಳು ಪಂಜಾಬ್ ಶಾಖೆಯಲ್ಲಿ, 226 ಸಿಂಧ್ ಶಾಖೆಯಲ್ಲಿ, 193 ಖಾತೆಗಳು ಬಲೂಚಿಸ್ಥಾನ ಶಾಖೆಯಲ್ಲಿ, 106 ಖಾತೆಗಳು ಗಿಲ್ಗಿಟ್-ಬಲೂಚಿಸ್ಥಾನ್ ಶಾಖೆಯಲ್ಲಿ, 27 ಖಾತೆಗಳು ಇಸ್ಲಾಮಾಬಾದ್ ಶಾಖೆಯಲ್ಲಿವೆ ಎಂದು ವರದಿಯಾಗಿದೆ.
Discussion about this post