ಉಡುಪಿ, ಅ.15: ಉಡುಪಿ ಚಲೋ, ಪಂಕ್ತಿಬೇಧ ಇತ್ಯಾದಿ ವಿವಾದಗಳ ನಡುವೆಯೇ ಉಡುಪಿ ಪೇಜಾವರಮಠದ ಅಧಿಕೃತ ವೆಬ್ ಸೈಟ್ ಪಾಕಿಸ್ತಾನದಿಂದ ಹ್ಯಾಕ್ ಆಗಿದೆ. ವೆಬ್ ಸೈಟ್ ಗುರುವಾರವೇ ಹ್ಯಾಕ್ ಆಗಿರುವುದು ಪತ್ತೆಯಾಗಿದ್ದು, ಮಠದ ಅಧಿಕಾರಿಗಳು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು. ಇದೀಗ ವೆಬ್ ಸೈಟನ್ನು ಸರಿಪಡಿಸಲಾಗಿದೆ.
www.pejavaraparyaya2016.orgಎಂಬ ಈ ವೆಬ್ ಸೈಟನ್ನು ತೆರೆಯುವಾಗ `ಹ್ಯಾಕ್ ಡ್ ಬೈ ಝಡ್.ಎಚ್.ಸಿ. ಎಂಬ ಸಂದೇಶದೊಂದಿಗೆ ನೀಲಿ ಬಣ್ಣದ ಪೇಜೊಂದು ತೆರೆದುಕೊಳ್ಳುತ್ತಿತ್ತು. ಮಠಕ್ಕೆ ಸಂಬಂಧಪಟ್ಟ ಯಾವುದೇ ಪೇಜುಗಳು ತೆರೆದುಕೊಳ್ಳುತ್ತಿರಲಿಲ್ಲ.
ಈ ನೀಲಿ ಬಣ್ಣದ ಪೇಜಿನಲ್ಲಿ ಮುಖ ಮುಚ್ಚಿಕೊಂಡಿರುವ ಭಯೋತ್ಪಾದಕನಂತಹ ಫೋಟೋ ಇದೆ, ಜೊತೆಗೆ ಅರ್ಧಚಂದ್ರ ನಕ್ಷತ್ರದ ಚಿತ್ರವೂ ಇದೆ. ಆದ್ದರಿಂದ ಇದು ಪಾಕಿಸ್ತಾನದ ಯೋರೋ ವೃತ್ತಿಪರರೇ ಹ್ಯಾಕ್ ಮಾಡಿದ್ದಾರೆ ಎಂದು ಭಾವಿಸಲಾಗಿದೆ.
ಈ ಬಗ್ಗೆ ದೂರು ಸ್ವೀಕರಿಸಿರುವ ನಗರ ಠಾಣೆಯ ಪೊಲೀಸರು ಬೆಂಗಳೂರು ಸೈಬರ್ ಕ್ರೈಂ ವಿಭಾಗಕ್ಕೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ. ಅಲ್ಲಿಂದ ತನಿಖೆ ಆರಂಭವಾಗಿದೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೇಜಾವರ ಶ್ರೀಗಳು, ಅದರಲ್ಲಿ ಪಾಕಿಸ್ತಾನ್ ಜಿಂದಾ ಬಾದ್, ಕಾಶ್ಮೀರ ಸ್ವತಂತ್ರ್ಯವಾಗಲಿ ಎಂದೆಲ್ಲಾ ಎಂದೆಲ್ಲಾ ಬರೆಯಲಾಗಿತ್ತು. ಇದು ಪಾಕಿಸ್ತಾನದಿಂದ ಯಾರೋ ಭಯೋತ್ಪಾದಕರು ಹ್ಯಾಕ್ ಮಾಡಿರಬೇಕು, ಭಾರತೀಯರ ಕೆಲಸ ಇದಲ್ಲ ಎಂದು ಹೇಳಿದ್ದಾರೆ.
Discussion about this post