ಮಡಿಕೇರಿ, ಅ.14: ಎಮ್ಮೆಮಾಡಿನ ಸೂಫಿ ಶಹೀದ್ ಹಾಗೂ ಸೈಯ್ಯದ್ ಹಸನ್ ಸಖಾಫ್ ತಂಞಳ್ ಅವರ ವಾರ್ಷಿಕ ಉರೂಸ್ ಸಮಾರಂಭ 2017ರ ಮಾರ್ಚ್ 3 ರಿಂದ 10ರವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಮ್ಮೆಮಾಡು ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಹುಸೈನ್ ಸಖಾಫಿ, ಜಮಾಅತ್ ನ ಆಡಳಿತ ಮಂಡಳಿಯ ಸಭೆಯಲ್ಲಿ ಉರೂಸ್ ಸಮಾರಂಭ ನಡೆಸುವ ದಿನ ನಿಗಧಿ ಮಾಡಲಾಯಿತು ಎಂದರು.
ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ನ್ನು ಮುಂದಿನ ವರ್ಷ ಮಾರ್ಚ್ 3 ರಿಂದ 10ರವರೆಗೆ ನಡೆಸಲು ಸಭೆಯಲ್ಲಿದ್ದ ಸರ್ವರು ಸಮ್ಮತಿ ಸೂಚಿಸಿದ್ದು, ಜಿಲ್ಲೆ ಮಾತ್ರವಲ್ಲದೆ ಹೊರ ರಾಜ್ಯದಿಂದಲು ಸಾವಿರಾರು ಭಕ್ತರು ಉರೂಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕುಂಬೂತ್ ಸಾದತ್ ಗಳು, ಪಾಣಕ್ಕಾಡ್ ಸಾದತ್ ಗಳು ಹಾಗೂ ಕಾಂತಪುರಂ ಉಸ್ತಾದ ಕೋರತಂಞಳ್ ಸೇರಿದಂತೆ ಹಲವು ಉಮರಾ ಉಲಮಾಗಳನ್ನು ಉರೂಸಿಗೆ ಆಹ್ವಾನಿಸಲಾಗುವುದೆಂದು ಕೆ.ಎಂ. ಹುಸೈನ್ ಸಖಾಫಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಬಿ.ಎಂ. ಉಸ್ಮಾನ್ ಹಾಜಿ, ಸದಸ್ಯರಾದ ಸಿ.ಎಂ. ಸಾದಲಿ. ಹಾಗೂ ಸಿ.ಎಂ. ಮಾಹಿನೆ ಉಪಸ್ಥಿತರಿದ್ದರು.
—>
News by: ಇಂದ್ರೇಶ್, ಮಡಿಕೇರಿ















