ಹನೋಯಿ, ಸೆ.3: ವಿಯೆಟ್ನಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಆಗ್ನೇಯ ಏಷ್ಯಾ ರಾಷ್ಟ್ರದ ರಕ್ಷಣಾ ವಲಯಕ್ಕೆ 500 ಮಿಲಿಯನ್ ಡಾಲರ್ ನೆರವನ್ನು ಘೋಷಣೆ ಮಾಡಿದ್ದಾರೆ.
ವಿಯೆಟ್ನಾಂ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಸಂಬಂಧ ಹಾಗೂ ವ್ಯವಹಾರದ ಕುರಿತು ಮಾತುಕತೆ ನಡೆಸಿದ ಮೋದಿ, ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಉಭಯ ರಾಷ್ಟ್ರಗಳು ರಕ್ಷಣಾ ವಲಯದಲ್ಲಿ ಸಹಕಾರವನ್ನು ವೃದ್ಧಿಗೊಳಿಸಲು, ಸಮಾನ ಉದ್ದೇಶವನ್ನು ಮುಂದುವರಿಸಲು ತೀರ್ಮಾನಿಸಿವೆ. ಕಡಲಕರೆಯಾಚೆಯ ಗಸ್ತು ದೊಣಿಗಳ ನಿರ್ಮಾಣ ಒಪ್ಪಂದದ ಭಾಗವಾಗಿದ್ದು, ರಕ್ಷಣಾ ವಲಯದಲ್ಲಿ ವಿಯೆಟ್ನಾಂ ಗೆ 500 ಮಿಲಿಯನ್ ಡಾಲರ್ನಷ್ಟು ನೆರವು ಘೋಷಣೆ ನೀಡುವುದಾಗಿ ಹೇಳಿದ್ದಾರೆ.
ವಿಯೆಟ್ನಾಂ ವೇಗ ಆರ್ಥಿಕ ಅಭಿವೃದ್ಧಿ ಸಾಧಿಸುವ ರಾಷ್ಟ್ರಗಳಲ್ಲಿ ಒಂದಾಗಿದ್ದು, 1.25 ಬಿಲಿಯನ್ ಭಾರತೀಯರು ವಿಯೆಟ್ನಾಂನ ಅಭಿವೃದ್ಧಿ ಪಯಣದಲ್ಲಿ ಪಾಲುದಾರರಾಗಲು ಸಿದ್ಧರಿರುತ್ತಾರೆ. ವಿಯೆಟ್ನಾಂನೊಂದಿಗೆ ಭಾರತದ ದ್ವಿಪಕ್ಷೀಯ ವ್ಯಾಪಾರ ಪ್ರಸ್ತುತ 7.8 ಬಿಲಿಯನ್ ಡಾಲರ್ನಷ್ಟಿದ್ದು, 2020 ರ ವೇಳೆಗೆ 15 ಮಿಲಿಯನ್ ಡಾಲರ್ನಷ್ಟಾಗುವ ಗುರಿ ಹೊಂದಲಾಗಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಯೆಟ್ನಾಂ ಭೇಟಿ ಉಭಯ ದೇಶಗಳ ನಡುವಿನ ಸ್ನೇಹ, ಐಕ್ಯಮತ್ಯ ಬಲವರ್ಧನೆಗೆ ಪರಸ್ಪರ ಸಹಕಾರಿಯಾಗಲಿದೆ. ಅಲ್ಲದೇ ರಾಜಕೀಯ, ಆರ್ಥಿಕ, ಬಾಹ್ಯಾಕಾಶ ಸಂಶೋಧನೆ, ರಕ್ಷಣೆ, ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ದೃಷ್ಟಿಯಿಂದ ಸಹಕಾರಿಯಾಗಿದೆ ಎಂದರು. ಉಭಯ ದೇಶಗಳು ಶಾಂತಿ, ಸ್ಥಿರತೆ, ಆರ್ಥಿಕ ಅಭಿವೃದ್ಧಿ ಕುರಿತಾಗಿ ಹೆಚ್ಚಿನ ಗಮನಹರಿಸಬೇಕಿದೆ ಎಂದರು.
ದಕ್ಷಿಣ ಏಷ್ಯಾದಲ್ಲಿ ಚೀನಾ ಪ್ರಭಾವ ಹತ್ತಿಕ್ಕುವ ನಿಟ್ಟಿನಲ್ಲಿ ಅಗತ್ಯ ವಾದ ಎಲ್ಲ ರಾಷ್ಟ್ರಗಳ ಬೆಂಬಲ ಪಡೆಯುವುದು ಪ್ರಧಾನಿ ಮೋದಿ ಅವರ ಕಾರ್ಯತಂತ್ರವಾಗಿದೆ. ಈಗಾಗಲೇ ಪರಸ್ಪರ ಸೇನಾ ನೆಲೆ ಬಳಕೆಗೆ ಅವಕಾಶ ಮಾಡಿಕೊಡುವ ಒಡಂಬಡಿಕೆಗೆ ಅಮೆರಿಕದೊಂದಿಗೆ ಸಹಿ ಹಾಕುವ ಮೂಲಕ ಭಾರತ ತನ್ನ ಶಕ್ತಿ, ಸಾಮಥ್ರ್ಯ, ತಂತ್ರಗಾರಿಕೆಯನ್ನು ಚೀನಾಗೆ ಮನವರಿಕೆ ಮಾಡಿಕೊಟ್ಟಿದೆ.
Discussion about this post