ಕರಾಚಿ: ಬಿಸಿಸಿಐ ಮುಖ್ಯಸ್ಥ ಅನುರಾಗ್ ಠಾಕೂರ್ ಪಾಕಿಸ್ಥಾನ ವಿರುದ್ಧ ಪ್ರಚೋದನಕಾರಿ ಹೇಳಿಕೆಯನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರ ಕೇಪ್ ಟೌನ್ ನಲ್ಲಿ ನಡೆಯುವ ಐಸಿಸಿ ಮಂಡಳಿ ಸಭೆಯನ್ನು ಬಹಿಷ್ಕರಿಸುವಂತೆ ಮಾಜಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಹಸಾನ್ ಮಣಿ ತಿಳಿಸಿದ್ದಾರೆ.
ಐಸಿಸಿ ಸಭೆಯಲ್ಲಿ ಎಲ್ಲರ ಗಮನಸೆಳೆಯುವ ಸಲುವಾಗಿ ಭಾರತ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅನುರಾಗ್ ಠಾಕೂರ್ ಪಾಕಿಸ್ಥಾನ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಎಹಸಾನ್ ಮಣಿ ಟೀಕಿಸಿದ್ದಾರೆ.
ಅನುರಾಗ್ ಠಾಕೂರ್ ಒರ್ವ ರಾಜಕಾರಣಿ ಮತ್ತು ಆಡಳಿತ ರೂಢ ಪಕ್ಷದ ಸಂಸತ್ ಸದಸ್ಯ ಪಾಕಿಸ್ಥಾನ ವಿರುದ್ಧ ಕ್ರಿಕೆಟ್ ಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಯಾವ ಅರ್ಹತೆ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದರ ಬಗ್ಗೆ ಐಸಿಸಿ ಇವರಿಂದ ವಿವರಣೆ ಕೇಳಬೇಕೆಂದು ತಿಳಿಸಿದ್ದಾರೆ.
Discussion about this post