ನವದೆಹಲಿ ಅ.19: ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಆಟಗಾರ ರೋಹಿತ್ ಕುಮಾರ್ ಪತ್ನಿ ಲಲಿತಾ ದಬಾಸ್ ತನ್ನ ತವರು ಮನೆಯಲ್ಲಿ ನೇಣೀಗೆ ಶರಣಾಗಿದ್ದಾರೆ.
ಪಶ್ಚಿಮ ದಿಲ್ಲಿಯಲ್ಲಿನ ತನ್ನ ಹೆತ್ತವರ ಮನೆಯಲ್ಲಿ ರಡೂವರೆ ತಾಸುಗಳ ಧ್ವನಿ ಸಂದೇಶವನ್ನು ತನ್ನ ಮೊಬೈಲ್‌ನಲ್ಲಿ ದಾಖಲಿಸಿಟ್ಟು ಕುಣಿಕೆಗೆ ತಲೆಯೊಡ್ಡಿದ್ದಾರೆ. ವರದಕ್ಷಿಣೆ ಕಿರುಕುಳ ತನ್ನ ಸಾವಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
೨೬ರ ಹರೆಯದ ರೋಹಿತ್ ಕುಮಾರ್ ಅವರ ಪತ್ನಿ ೨೮ರ ಹರೆಯದ ಲಲಿತಾ ದಬಾಸ್ ಮಾರ್ಚ್‌ನಲ್ಲಿ ವಿವಾಹವಾಗಿದ್ದರು. ಇದು ಲಿಲತಾಗೆ ರಡನೆಯ ವಿವಾಹವಾಗಿತ್ತು. ರೋಹಿತ್ ೨೦೦೯ರಲ್ಲಿ ಕ್ರೀಡಾಕೋಟಾದಡಿ ನೇವಿಗೆ ಸೇರಿದ್ದರು.ಲಲಿತಾ ಅವರೊಂದಿಗೆ ಸುಮಾರು ಒಂದು ವರ್ಷಕಾಲ ಡೇಟಿಂಗ್ ನಡೆಸಿ, ಆನಂತರ ವಿವಾಹ ಬಂಧನಕ್ಕೆ ಒಳಗಾಗಿದ್ದರು.
ರೋಹಿತ್ ಕುಮಾರ್ ಪೋಷಕರು ಹೆಚ್ಚಿನ ವರದಕ್ಷಿಣೆ ತರುವಂತೆ ಲಲಿತಾ ಅವರನ್ನು ಆರಂಭದಿಂದಲೇ ಪೀಡಿಸುತ್ತಿದ್ದರು. ಸ್ವತಃ ರೋಹಿತ್ ಕುಮಾರ್, ಲಿಲತಾ ಅವರ ತಂದೆಯ ಸ್ಥಿರಾಸ್ತಿಯಲ್ಲಿ ಪಾಲು ಕೇಳಿದ್ದರು ಎನ್ನಲಾಗಿದೆ.
ಮದುವೆಯ ದಿನವೇ ರೋಹಿತ್ ತನ್ನ ಮಾವನಲ್ಲಿ ತನಗೆ ಡೀಸಿಲ್ ಚಾಲಿತ ಫಾರ್ಚೂನರ್ ವಾಹನ ಹಾಗೂ ಹೆಚ್ಚಿನ ಹಣ ಕೊಡಬೇಕು. ಹೋಂಡಾ ಸಿಟಿ ಕಾರನ್ನು ನಾವು ಉಡುಗೊರೆಯಾಗಿ ನೀಡಲು ಬುಕ್ ಮಾಡಿದ್ದೆವು. ಅದು ತನಗೆ ಬೇಡವೆಂದು ಆತ ಪಟ್ಟು ಹಿಡಿದಿದ್ದಾಗ ನಾವು ಆ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದೆವು ಎಂದು ಲಲಿತಾ ತಂದೆ ಹೇಳಿದ್ದಾರೆ.
ಲಲಿತಾ ಅವರ ತಂದೆ ಕರಣ್ ದಬಾಸ್ ಅವರು ಡಿಟಿಸಿ ಕಂಡಕ್ಟರ್ ಆಗಿ ನಿವೃತ್ತರಾಗಿದ್ದಾರೆ. ಲಲಿತಾ ಅತ್ತೆ ಮಾವನೊಂದಿಗೆ ದೆಹಲಿಯಲಿದ್ದರು. ರೋಹಿತ್ ಕುಮಾರ್ ಮುಂಬೈನಲ್ಲಿದ್ದರು.
Discussion about this post