Read - 3 minutes
ನವದೆಹಲಿ: ಸೆ:12: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ ತೆ ಹಿನ್ನಡೆಯಾಗಿದ್ದು, ಸುಪ್ರೀಂ ಕೋರ್ಟ ತಮಿಳುನಾಡಿಗೆ ಸೆ.20 ರವರೆಗೆ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ ಈ ಹಿಂದೆ ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಉಭಯ ರಾಜ್ಯಗಳ ಪರ ವಕೀಲರ ವಾದವನ್ನು ಆಲಿಸಿತು. ಬಳಿಕ ತನ್ನ ಆದೇಶ ನೀಡಿದ ನ್ಯಾಯಾಲಯ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನಂತೆ ಸೆಪ್ಟೆಂಬರ್ 20ರವರೆಗೆ ನೀರು ಹರಿಸುವಂತೆ ಆದೇಶ ನೀಡಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಇದೇ 5ರಂದು ನೀಡಿರುವ ಆದೇಶವನ್ನು ಮಾಪರ್ಾಡು ಮಾಡುವಂತೆ ಕೋರಿ ಕರ್ನಾಟಕ ಶನಿವಾರ ರಾತ್ರಿ ಸುಪ್ರೀಂ ಕೋರ್ಟ ನಲ್ಲಿ ಅರ್ಜಿಸಲ್ಲಿಸಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಉದಯ್ ಲಲಿತ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಈ ಹಿಂದಿನ ಆದೇಶಕ್ಕಿಂತ ಮತ್ತೆ 3 ಟಿಎಂಸಿ ಹೆಚ್ಚುವರಿ ನೀರು ಬಿಡುವಂತೆ ಆದೇಶ ಹೊರಡಿಸಿದೆ.
ಅರ್ಜಿ ವಿಚಾರಣೆ ವೇಳೆ ಕನರ್ಾಟಕ ಪರ ವಾದ ಮಂಡಿಸಿದ ಹಿರಿಯ ವಕೀಲ ಪಾಲಿ ನಾರಿಮನ್, ಕರ್ನಾಟಕದಲ್ಲಿ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದ್ದು ನಾಲ್ಕು ಡ್ಯಾಂಗಳಲ್ಲಿ 34 ಟಿಎಂಸಿ ಯಷ್ಟು ಮಾತ್ರ ನೀರಿದೆ.ಅಲ್ಲದೆ ವೆಟ್ಟೂರು ಜಲಾಶಯದಲ್ಲಿ 42. 4 ಟಿಎಂಸಿ ಯಷ್ಟು ನೀರಿದ್ದು ತಮಿಳುನಬಾಡಿಗೆ ಯಾವುದೇ ಸಮಸ್ಯೆ ಇಲ್ಲ.ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಜತೆಗೆ ನೀರಿನ ಸಮಸ್ಯೆಯು ಹೆಚ್ಚಾಗಿದೆ ಎಂದು ಸ್ಪಷ್ಟನೆ ನೀಡಿದರು.
ಅಲ್ಲದೆ .ಕರ್ನಾಟಕದಲ್ಲಿ ಈಗಾಗಲೇ ಮಾನ್ಸೂನ್ ಮುಗಿದಿದೆ. ತಮಿಳುನಾಡಿನಲ್ಲಿ ಮಾನ್ಸೂನ್ ಆರಂಭವಾಗಿದ್ದು, ಪ್ರಭಲವಾಗಿ ಮಳೆಯಾಗಲಿದೆ ಎಂದು .ಕರ್ನಾಟಕದ ಸ್ಥಿತಿಯನ್ನು ಮನವರಿಗೆ ಮಾಡಿದರು.
ಈ ನಡುವೆ ತಮಿಳುನಾಡಿನ ಪರ ವಾದ ಮಂಡಿಸಿದ ಶೇಖರ್ ನಫಾಡೆ, ಕಾವೇರಿ ನದಿ ನೀರಿನ ಆದೇಶವನ್ನು ಮಾರ್ಪಡಿಸಲು .ಕರ್ನಾಟಕ ಏಕಪಕ್ಷೀಯ ನಿರ್ಧಾರಕ್ಕೆ ಮುಂದಾಗಿದೆ ಕಾವೇರಿ ನದಿ ನೀರು ಎರಡು ರಾಜ್ಯಗಳಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂದು ವಾದ ಮಂಡಿಸಿದರು.
ಕರ್ನಾಟಕ ಹಾಗೂ ತಮಿಳುನಾಡು ಉಭಯ ರಾಜ್ಯಗಳ ವಾದ ಆಲಿಸಿದ ಬಳಿಕ ಆದೇಶ ಪ್ರಕಟಿಸಿದ ನ್ಯಾಯಾಲಯ, ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ .ಕರ್ನಾಟಕಕ್ಕೆ ಸೂಚನೆ ನೀಡಿತು. ಮುಂದಿನ ವಿಚಾರಣೆಯನ್ನು ಸೆ.20ಕ್ಕೆ ಮುಂದೂಡಲಾಯಿತು.
ಈ ಮಧ್ಯೆ ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಬೆಳಗಾವಿ ಸೇರಿದಂತೆ ಅನೇಕ ಕಡೆ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿವೆ. ಸುಪ್ರೀಂಕೋರ್ಟ ತೀರ್ಪು ರಾಜ್ಯಕ್ಕೆ ರಿಲೀಫ್ ನೀಡುವ ಬದಲು ಹೆಚ್ಚುವರಿ ನೀರು ಹರಿಸುವಂತಾಗಿದೆ.
ಕರ್ನಾಟಕಕ್ಕೆ ನಿರಾಶೆ:
ಸುಪ್ರೀಂಕೋರ್ಟನಲ್ಲಿ ಸಲ್ಲಿಸಿದ್ದ ಮಾರ್ಪಾಡು ಅರ್ಜಿಯ ವೇಳೆ ನ್ಯಾಯಾಲಯ ಹಿಂದೆ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಬಹುದೆಂಬ ನಿರೀಕ್ಷೆ ಎಲ್ಲರಲ್ಲಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಹಿರಿಯ ವಕೀಲ ನಾರಿಮನ್ ಕೂಡ ರಾಜ್ಯದ ಜಲಾಶಯ ಸ್ಥಿತಿ-ಗತಿ ಮತ್ತು ಅಂಕಿ-ಅಂಶಗಳ ಕುರಿತು ನ್ಯಾಯಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಆದರೆ, ಕನ್ನಡ ಪರ ಸಂಘಟನೆಗಳು ಮತ್ತು ರೈತ ಮುಖಂಡರು ಕಳೆದ ಒಂದು ವಾರದಿಂದ ನಡೆಸಿದ ಪ್ರತಿಭಟನೆ, .ಕರ್ನಾಟಕ ಬಂದ್, ನ್ಯಾಯಾಲಯದ ಆದೇಶ ವಿರುದ್ಧ ಧಿಕ್ಕಾರದ ಘೋಷಣೆಗಳಿಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಗರಂ ಆದ ಕೋರ್ಟ:
ವಾದ ಮಂಡನೆ ನಡೆಯುತ್ತಿದ್ದ ವೇಳೆ ಸುಪ್ರೀಂಕೋರ್ಟ ನ್ಯಾಯಮೂರ್ತಿ ದೀಪಕ್ಮಿಶ್ರ ಅವರು ಗರಂ ಆದ ಪ್ರಸಂಗವೂ ಜರುಗಿತು. ಕೆಲವರು ನ್ಯಾಯಾಲಯದ ಆದೇಶದ ವಿರುದ್ಧ ಕೂಗಾಡುತ್ತಿದ್ದಾರೆ. ಏನಿದು ಎಂದು ವಕೀಲರನ್ನು ಪ್ರಶ್ನಿಸಿದರು.
ಸುಪ್ರೀಂಕೋರ್ಟ ನೀಡುವ ತೀರ್ಪನ್ನು ಪಾಲನೆ ಮಾಡಬೇಕಾದದ್ದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಯಾರೋ ಒಂದಿಷ್ಟು ಮಂದಿ ಪ್ರತಿಭಟನೆ ನಡೆಸುತ್ತಾರೆ. ಇಲ್ಲವೇ ಕೂಗಾಟ ಮಾಡುತ್ತಾರೆ ಎಂದಾಕ್ಷಣ ನಾವು ಕೈ ಕಟ್ಟಿ ಕೂರಲು ಸಾಧ್ಯವಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವುದು ನಿಮ್ಮ ಕರ್ತವ್ಯ ಎಂದು ನ್ಯಾಯಾಧೀಶರು ಕಿವಿಮಾತು ಹೇಳಿದರು.
ಪ್ರಸ್ತುತ ಉಂಟಾಗಿರುವ ಸಮಸ್ಯೆಯಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ. ಕೆಲವರು ವಸ್ತುಸ್ಥಿತಿ ತಿಳಿಯದೆ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸುವ ಹಂತಕ್ಕೆ ಬಂದಿದ್ದಾರೆ. ಒಕ್ಕೂಟ ವ್ಯವಸ್ಥೆ ಗೌರವಿಸುವುದಾದರೆ ಮೊದಲು ಆದೇಶ ಪಾಲನೆ ಮಾಡಬೇಕು. ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಮಿಶ್ರ ಆಕ್ಷೇಪಿಸಿದರು.
ಹೆಚ್ಚುವರಿ ನೀರು:
ರಾಜ್ಯ ಸರ್ಕಾರದ ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳ ಒತ್ತಡಕ್ಕೆ ಮಣಿದು ಸುಪ್ರೀಂಕೋರ್ಟಗೆ ಮರುಪರಿಶೀಲನಾ ಅರ್ಜಿ ಹಾಕಿದ ಪರಿಣಾಮ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಬೇಕಾದ ಸಂದಿಗ್ಧತೆಗೆ ಸಿಲುಕಿದೆ.
ಈ ಹಿಂದೆ ನೀಡಿದ್ದ ಆದೇಶದಂತೆ ರಾಜ್ಯ ಸರ್ಕಾರ ಸೆ.15ವರೆಗೆ 15ಸಾವಿರ ಕ್ಯೂಸೆಕ್ ನೀರು ಹರಿಸಿ ಜಲಾಶಯದ ಬಾಗಿಲು ಮುಚ್ಚಬಹುದಿತ್ತು. ಆದರೆ, ಮರುಪರಿಶೀಲನಾ ಅರ್ಜಿ ಹಾಕಿದ ಪರಿಣಾಮ ಹೆಚ್ಚೂ ಕಡಿಮೆ 2ರಿಂದ 3 ಟಿಎಂಸಿ ಹೆಚ್ಚುವರಿ ನೀರು ಹರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಹತ್ತು ದಿನ 15ಸಾವಿರ ಟಿಎಂಸಿ ನೀರು ಹರಿಸಿದ್ದರೆ ಒಂದು ದಿನಕ್ಕೆ 1.25 ಟಿಎಂಸಿ ನೀರು ಹರಿಯುತ್ತಿತ್ತು. ಮೂರು ಸಾವಿರ ಕ್ಯೂಸೆಕ್ ನೀರು ಕಡಿತಗೊಳಿಸಿ ಐದು ದಿನ ಹೆಚ್ಚುವರಿ ನೀರು ಹರಿಸುವಂತೆ ಸುಪ್ರೀಂಕೋರ್ಟ ಸೂಚನೆ ಕೊಟ್ಟಿರುವುದು ರಾಜ್ಯದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದರ ಪರಿಣಾಮ ನಮ್ಮ ಜಲಾಶಯಗಳಿಂದ ಸರಿಸುಮಾರು 2ರಿಂದ 3 ಟಿಎಂಸಿ ನೀರು ಹೆಚ್ಚುವರಿ ನೀರು ಹರಿಸಲೇಬೇಕು.
ವಾದ ಮಂಡನೆ:
ಇದಕ್ಕೂ ಮುನ್ನ ಬೆಳಗ್ಗೆ ರಾಜ್ಯದ ಪರ ವಾದ ಮಂಡಿಸಿದ ಪಾಲಿ ನಾರಿಮನ್ ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೈ ಕೊಟ್ಟ ಪರಿಣಾಮ ಬರಗಾಲ ಆವರಿಸಿದೆ. ಕಾವೇರಿ ಜಲಾನಯನ ಜಲಾಶಯಗಳಾದ ಕೆಆರ್ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿಯಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ಕುಡಿಯುವ ನೀರಿಗೆ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಮುಂಗಾರು ಕೈಕೊಟ್ಟಿರುವ ಕಾರಣ ಹಿಂಗಾರು ಮಳೆಯಾಗುತ್ತದೆ ಎಂಬ ಭರವಸೆಯೂ ಇಲ್ಲ. ಬೆಂಗಳೂರು, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಮತ್ತಿತರ ನಗರ ಪ್ರದೇಶಗಳು ಈ ನೀರನ್ನೇ ಅವಲಂಭಿಸಿವೆ.
ತಮಿಳುನಾಡು ಕಾವೇರಿ ನೀರು ಕೇಳುತ್ತಿರುವುದು ಸಾಂಬಾ ಬೆಳೆಗೆ. ಮೆಟ್ಟೂರು ಜಲಾಶಯದಲ್ಲಿ ಈಗಾಗಲೇ 90 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಕಾವೇರಿ ತೀರದ ನಾಲ್ಕು ಜಲಾಶಯಗಳಲ್ಲಿ 37 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.
ಕರ್ನಾಟಕದಲ್ಲಿ ಮಾನ್ಸೂನ್ ಪ್ರಭಾವ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ತಮಿಳುನಾಡಿನಲ್ಲಿ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆ ತಜ್ಞರ ಪ್ರಕಾರ ಹಿಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೆಟ್ಟೂರು ಜಲಾಶಯದಲ್ಲಿ 42.04 ಟಿಎಂಸಿ ನೀರು ಸಂಗ್ರಹವಾಗಿದೆ.
ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಈ ನೀರು ತೊಂದರೆ ಉಂಟು ಮಾಡುವುದಿಲ್ಲ. ಒಂದು ಬಾರಿ ಕರ್ನಾಟಕದ ಜಲಾಶಯಗಳಿಂದ ನೀರು ಹರಿಸಿದರೆ ಪುನಃ ಅದನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ.
ಈಗಾಗಲೇ ನೀರು ಹರಿಸಿರುವುದರಿಂದ ರೈತರು ಮತ್ತು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಲಾಶಯಗಳಿಂದ ನೀರು ಬಿಡಲು ಎಷ್ಟು ಸಮಸ್ಯೆ ಇದೆಯೋ ಜತೆಗೆ ಕಾನೂನು ಸುವ್ಯವಸ್ಥೆಯ ತೊಂದರೆಯೂ ಎದುರಾಗಲಿದೆ.
ನಾವು ಒಕ್ಕೂಟದ ವ್ಯವಸ್ಥೆಯನ್ನು ಗೌರವಿಸುತ್ತಲೇ ಬಂದಿದ್ದೇವೆ. ಈ ಹಿಂದೆ ನ್ಯಾಯಾಲಯ ಆದೇಶ ನೀಡಿದ ಸಂದರ್ಭದಲ್ಲೆಲ್ಲಾ ನೀರು ಬಿಡುತ್ತಾ ಬಂದಿದ್ದೇವೆ. ಈಗ ಬರಗಾಲ ಎದುರಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ನಾರಿಮನ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಟ್ಟರು.
ನಮ್ಮಲ್ಲೇ ಕುಡಿಯಲು ನೀರು ಇಲ್ಲದಿರುವಾಗ ಬೆಳೆಗಳಿಗೆ ನೀರು ಬಿಡಲು ಕೇಳುತ್ತಿರುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಕಳೆದ ಸೆ.5ರಂದು ನ್ಯಾಯಾಲಯ ನೀಡಿದ ಆದೇಶದಂತೆ ಪ್ರತಿದಿನ ಜಲಾಶಯಗಳಿಂದ 15ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.
ತಮಿಳುನಾಡು ಮೂಲದ 100 ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ
ಕಾವೇರಿ ನದಿ ನೀರು ಹಂಚಿಕೆ ವಿವಾದ ಕರ್ನಾಟಕ -ತಮಿಳುನಾಡು ಉಭಯ ರಾಜ್ಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡಿನಲ್ಲಿ ಕನ್ನಡಿಗರ ಒಡೆತನದ ಹೋಟೆಲ್ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳು, ಪೆಟ್ರೋಲ್ ಬಾಂಬ್ ಎಸ್ದೆರೆ, ಕರ್ನಾಟಕದಲ್ಲಿ ಕಂಡು ತಮಿಳುನಾಡು ಮೂಲದ ಬಸ್, ಕಾರು ಹಾಗೂ ಲಾರಿಗಳ ಮೇಲೆ ಕಲ್ಲು ಎಸೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದೇ ಕಡೆ ನಿಂತಿದ್ದ ತಮಿಳುನಾಡು ಫಲಕದ 30 ಕ್ಕೂ ಹೆಚ್ಚು ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇನ್ನು 30 ಲಾರಿಗಳು ಹಾಗೂ ಕಾರುಗಳ ಗಾಜುಗಳು ಪುಡಿ ಪುಡಿ ಮಾಡಿ, ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ತಮಿಳುನಾಡಿನಲ್ಲಿ
ಆಟೋದಲ್ಲಿ ಬಂದ ದುಷ್ಕರ್ಮಿಗಳ ತಂಡ, ನ್ಯೂ ವುಡ್ ಲ್ಯಾಂಡ್ ಹೋಟೆಲ್ ನ ಮುಂಭಾಗ 6 ಪೆಟ್ರೋಲ್ ಬಾಂಬ್ ಗಳನ್ನು ಎಸೆದು ಪರಾರಿಯಾಗಿದೆ.ಇದರಿಂದಾಗಿ ಹೋಟೆಲ್ ನ ಗಾಜಿಗಳು ಪುಡಿ ಪುಡಿಯಾಗಿವೆ. ಈ ದಾಳಿಯ ಹಿಂದೆ ಡಿಪಿಡಿಕೆ ಸಂಘಟನೆಯ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಕನರ್ಾಟಕ ನೋಂದಣಿಯ 30ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಇಲ್ಲಿನ ರಾಮನಾಥಪುರಂನಲ್ಲಿ ಕನ್ನಡ ಕನರ್ಾಟಕ ನೋಂದಣಿಯ 5 ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಹಾನಿ ಮಾಡಲಾಗಿದೆ.
ಭುಗಿಲೆದ್ದ ಕಾವೇರಿ ಪ್ರತಿಭಟನೆ: ಶಾಂತಿ ಕಾಪಾಡುವಂತೆ ಸಿಎಂ ಮನವಿ
ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಉಂಟಾಗಿರುವ ಪ್ರತಿಭಟನೆ, ಗಲಭೆ, ಹಿಂಸಾಚಾರ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆ ಮತ್ತು ಕರ್ನಾಟಕದ ಅಂಗಡಿ-ಹೊಟೇಲ್ ಗಳ ಮೇಲೆ ನಡೆಸಿರುವ ದಾಳಿ ಖಂಡನಾರ್ಹವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದು ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಎರಡು ರಾಜ್ಯಗಳಲ್ಲಿರುವ ತಮಿಳರು ಮತ್ತು ಕನ್ನಡಿಗರಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಅಲ್ಲಿನ ಕನ್ನಡಿಗರಿಗೆ ರಕ್ಷಣೆ ನೀಡುವಂತೆ ನಮ್ಮ ರಾಜ್ಯದ ಮುಖ್ಯ ಕಾರ್ಯದಶರ್ಿಗಳು ತಮಿಳುನಾಡಿನ ಮುಖ್ಯ ಕಾರ್ಯದರ್ಶಿಗಳ ಜತೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಉಭಯ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರು ಕೂಡ ಮಾತನಾಡಿದ್ದಾರೆ ಎಂದು ಹೇಳಿದರು.
Discussion about this post