ಮೈಸೂರು, ಸೆ.6: ಯುವಭಾರತ್ ಸಂಘಟನೆಯ ವತಿಯಿಂದ ನಗರದ ಅಗ್ರಹಾರ ವೃತ್ತದಲ್ಲಿ ಯುವಕರು ಖಾಲಿ ಕೊಡ ಮತ್ತು ಗಣಪತಿಯಿಡಿದು “ನಾರಿಮನ್ ಗೆ ಧಿಕ್ಕಾರ”,” ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾಗೆ ಧಿಕ್ಕಾರ”, “ನಮ್ಮ ದು ನಮ್ಮದು ಕಾವೇರಿ ನಮ್ಮದು,” ಗಣಪತಿ ವಿಸರ್ಜನೆ ಗೆ ನಮ್ಮ ಕಾವೇರಿ ಬರಿದಾಳಾಗಿದ್ದಾಳೆ ಯಾವುದೇ ಕಾರಣಕ್ಕೊ ನಾವು ನೀರು ಬಿಡುವುದಿಲ್ಲ, “ರಕ್ತ ಕೊಟ್ಟೆವು ನೀರು ಕೊಡುವುದಿಲ್ಲ “ಎಂಬ ಘೋಷಣೆ ಯೊಂದಿಗೆ ಪ್ರತಿಭಟನೆ ಮಾಡಲಾಯಿತು.
ನಂತರ ಮಾತನಾಡಿದ ಯುವಭಾರತ್ ಸಂಘಟನೆಯ ಸಂಚಾಲಕ ಜೋಗಿಮಂಜು, ನಮ್ಮ ರಕ್ತ ಕೊಟ್ಟೆವು ನೀರು ಮಾತ್ರ ಬಿಡುವುದಿಲ್ಲ ಇಂದಿನ ಯುವಪೀಳಿಗೆಯ ಯುವಕರು ಈ ನಾಡಿನ ನೆಲ, ಜಲ, ಭಾಷೆಗೆ ಧಕ್ಕೆ ಆದಂತಹ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು, ಹಾಗೆಯೇ ರಾಜ್ಯದ ಪರ ವಕಲಾತ್ತು ಮಂಡಿಸಿರುವ ನಾರಿಮನ್ ರವರು ಈ ರಾಜ್ಯಕ್ಕೆ ಮಾಡಿರುವ ದ್ರೋಹ, ಸುಪ್ರೀಂ ಕೋರ್ಟಿನ ಆದೇಶದ ಪ್ರತಿಯ ನಾಲ್ಕನೆಯ ಪುಟದ ಮೊರನೆಯ ಕಾಲಂ ನಲ್ಲಿ ನೀರನ್ನು ಕೊಡುವುದಾಗಿ ಮಂಡಿಸಿರುವುದು ಈ ರಾಜ್ಯದ ಜನತೆಗೆ ಮಾಡಿರುವ ದ್ರೋಹ. ಹಾಗಾಗಿ ಈ ಕೊಡಲೇ ರಾಜ್ಯ ಸರ್ಕಾರ ಅವರನ್ನು ವಜಾಗೊಳಿಸಬೇಕು, ಹಾಗೆಯೇ ರಾಜ್ಯ ಸರ್ಕಾರ ತಮಿಳುನಾಡಿನ ಪರ ಮೃದು ಧೋರಣೆ ತೊರುತ್ತಿರುವುದು ಸರಿಯಲ್ಲ ಎಂದರು.
ನೀರಾವರಿ ಸಚಿವ ಎಂ.ಬಿ. ಪಾಟೀಲ್ ರಾಜ್ಯದಿಂದ ನೀರನ್ನು ಬಿಡುತ್ತಿರುವುದು ರಾಜ್ಯದ ಜನತೆಗೆ ಮೋಸ ಮಾಡುತ್ತಿರುತ್ತಾರೆ ಈ ಹೊಣೆಯನ್ನು ಹೊತ್ತು ಕೊಡಲೇ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಏಕೆಂದರೆ, ರಾಜ್ಯದ ಜನತೆಗೆ ಕುಡಿಯಲಿಕ್ಕೆ ನೀರಿಲ್ಲ, ರೈತರ ಬೆಳೆಗಳಿಗೆ ನೀರಿಲ್ಲ, ರೈತರ ಗೊಳು ಕೆಳುವವರಿಲ್ಲ, ಗಣಪತಿ ಹಬ್ಬವಿದೆ ನಮ್ಮ ನಮ್ಮ ಮನೆಯ ಗಣಪತಿಯ ವಿಸರ್ಜಿಸಲು ಕಾವೇರಿ ನದಿ ಬರಿದಾಗಿದೆ. ಇಂತಹ ಸಂದರ್ಭದಲ್ಲೂ ನೀರನ್ನು ಕೇಳುತ್ತಿರುವ ತಮಿಳುನಾಡು ಸರ್ಕಾರಕ್ಕೆ ಇಂದಿನ ಯುವಕರು ಧಿಕ್ಕಾರ ಹೇಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಮಾ.ವಿ. ರಾಮಪ್ರಸಾದ್, ಜೋಗಿಮಂಜು, ವಿಕ್ರಮ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ರವಿತೇಜ, ಆನಂದ್, ಸಂದೀಪ್, ಲೋಹಿತ್, ರವಿ ಸಾತಗಳ್ಳಿ, ವೆಂಕಟೇಶ, ವೇಣು ಮುಂತಾದವರು ಇದ್ದರು.
News by: ಪುನೀತ್ ಕೂಡ್ಲೂರು, ಮೈಸೂರು
Discussion about this post