ನವದೆಹಲಿ, ಸೆ.29: ಉರಿ ಸೆಕ್ಟರ್ ದಾಳಿಯಿಂದ ಕೆರಳಿದ ಸಿಂಹವಾಗಿರುವ ಭಾರತೀಯ ಯೋಧರು ಮೋದಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆ ಬಡಿಯುಲು ಆರಂಭಿಸಿದ್ದು, ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 150 ಕ್ಕೂ ಅಧಿಕ ಉಗ್ರರನ್ನು ಸಂಹಾರ ಮಾಡಲಾಗಿದೆ ಎಂದು ಹೇಳಲಾಗಿದೆ.
ಈಗಾಗಲೇ ಪ್ರಕಟವಾಗಿರುವ ಮಾಹಿತಿಯಲ್ಲಿ ಉಗ್ರರ ಸಾವಿನ ಸಂಖ್ಯೆಯಲ್ಲಿ ಗೊಂದಲಗಳಿಗೆ ಸುಮಾರು ೩೫ರಿಂದ ೫೦ ಮಂದಿ ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಉನ್ನತ ಮೂಲಗಳ ಮಾಹಿತಿಯನ್ವಯ ನಿನ್ನೆಯ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ 150ಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ವಿಜಯೋತ್ಸವ
ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆ ಬಡಿಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ದೇಶಕ್ಕೆ ನೀಡುತ್ತಿರುವ ಯಶಸ್ಸಿನಿಂದ ಸಂತಸಗೊಂಡು ಬಿಜೆಪಿ ನವದೆಹಲಿಯಲ್ಲಿ ವಿಜಯೋತ್ಸವ ಆಚರಿಸಿದೆ.
ಸಂತಸ ವ್ಯಕ್ತಪಡಿಸಿದ ಬಲೂಚಿಸ್ಥಾನ
ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆ ಬಡಿಯುತ್ತಿರುವ ಭಾರತದ ಕ್ರಮವನ್ನು ಬಲೂಚಿ ಪ್ರತ್ಯೇಕತಾವಾದಿಗಳು ಸ್ವಾಗತಿಸಿದ್ದಾರೆ.
ಈ ಕುರತಂತೆ ಮಾತನಾಡಿರುವ ಬಲೂಚಿ ಹೋರಾಟಗಾರ ಮಜ್ದಾಕ್, ಉಗ್ರರ ವಿರುದ್ಧ ಭಾರತ ಕೈಗೊಂಡಿರುವ ಕಾರ್ಯಾಚರಣೆ ಅತ್ಯಂತ ಸ್ವಾಗತಾರ್ಹ. ಇಂತಹ ನಿರ್ಧಾರವನ್ನು ತಳೆದಿರುವ ಭಾರತವನ್ನು ನಾವು ಅಭಿನಂದಿಸುತ್ತೇವೆ ಎಂದಿದ್ದಾರೆ.
ಸರ್ಜಿಕಲ್ ಸ್ಟೈಕ್ ಎಂದರೇನು?
ಯುದ್ಧದಂತಹ ಸನ್ನಿವೇಶಗಳು ನಿರ್ಮಾಣವಾದಾಗ ಭಾರಿ ಪ್ರಮಾಣದ ಹಾನಿಗಳಾಗುತ್ತವೆ. ಪ್ರಾಣ ಹಾನಿ, ಆಸ್ತಿ-ಪಾಸ್ತಿ ಹಾನಿ ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಹಾನಿಯಾಗಳಾಗುತ್ತವೆ. ಇಂತಹ ಹಾನಿಗಳನ್ನು ತಪ್ಪಿಸಲು ಹಾಗೂ ಶತ್ರುಪಾಳಯದ ಎಲ್ಲ ವರ್ಗದ ಮೇಲೆ ಸಾಮೂಹಿಕವಾಗಿ ಎರಗುವುದಕ್ಕಿಂತ ನಿರ್ದಿಷ್ಟ ಜಾಗದಲ್ಲಿ ನಿರ್ದಿಷ್ಟ ವರ್ಗದ ಮೇಲೆ ದಾಳಿ ಮಾಡುವುದೇ ಸರ್ಜಿಕಲ್ ಸ್ಟೈಕ್ ಅಥವಾ ಸೀಮಿತ ದಾಳಿ ಎಂದು ಕರೆಯಲಾಗುತ್ತದೆ.
ನಿನ್ನೆ ನಡೆದ ದಾಳಿ ಹೇಗಿತ್ತು? ಇಲ್ಲಿದೆ ಪ್ರಮುಖ ಅಂಶಗಳು:
೧)ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ಬುಧವಾರ ಮಧ್ಯರಾತ್ರಿ ಭಾರತೀಯ ಸೇನೆ ದಾಳಿ ನಡೆಸಿತ್ತು. ಮಧ್ಯರಾತ್ರಿ ೧೨.೩೦ರಿಂದ ಬೆಳಗಿನ ಜಾವ ೪.೩೦ರವರೆಗೆ ದಾಳಿ.
೨)ಪಾಕಿಸ್ತಾನ ನೆಲದ ೫೦೦ಮೀಟರ್‌ನಿಂದ ಸುಮಾರು ೨ ಕಿಲೋ ಮೀಟರ್ ದೂರದವರೆಗೆ ನುಗ್ಗಿ ಉಗ್ರರ ಕ್ಯಾಂಪ್ ಮೇಲೆ ಕಮಾಂಡೋ ದಾಳಿ.
೩)೬ ಉಗ್ರರ ಕ್ಯಾಂಪ್‌ಗಳನ್ನು ಪುಡಿಗಟ್ಟಿ ಭಾರತೀಯ ಯೋಧರು.
೪) ಪಿಓಕೆಯಲ್ಲಿನ ಉಗ್ರರ ಶಿಬಿರದ ಮೇಲೆ ಕಳೆದ ಒಂದು ವಾರದಿಂದ ತೀವ್ರ ನಿಗಾ ಇರಿಸಲಾಗಿತ್ತು.
೫)ಪಿಓಕೆಯಲ್ಲಿದ್ದ ಉಗ್ರರು ಜಮ್ಮು ಕಾಶ್ಮೀರ ಮತ್ತು ಆಯಕಟ್ಟಿನ ಸ್ಥಳದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು.
೬)ವಾಯದಳದಿಂದ ಹೈಅಲರ್ಟ್ ಘೋಷಣೆ
೭)ಈ ಭಾಗದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಯಿತು.
Discussion about this post