ನವದೆಹಲಿ, ಸೆ.7: ಅಧಿಕಾರಕ್ಕೆ ಬಂದು 18 ತಿಂಗಳುಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ರಾಜ್ಯ ಸರ್ಕಾರ ಸಮೋಸಗಳಿಗೆ ವ್ಯಯಿಸಿದ ಮೊತ್ತವೆಷ್ಟು ಗೊತ್ತೇ. ಅದು ಬರೋಬ್ಬರಿ ಒಂದು ಕೋಟಿ ರೂಪಾಯಿ.
ಕೇಜ್ರಿವಾಲ್ ಹಾಗೂ 6 ಸಂಪುಟ ಸಚಿವರು ಕಚೇರಿಗೆ ಭೇಟಿಯಾಗಲು ಬರುವವರ ಚಹಾ-ತಿಂಡಿಗಳಿಗಾಗಿ ಖರ್ಚು ಮಾಡಿರುವ ವಿವರಗಳನ್ನು ವಿವೇಕ್ ಗಾರ್ಗ್ ಎಂಬ ಸಾಮಾಜಿಕ ಕಾರ್ಯಕರ್ತ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿದ್ದಾರೆ.
ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಹಾಗೂ ಸಚಿವರುಗಳು ವ್ಯಯಿಸಿರುವ ವಿವರ ಇಂತಿದೆ:
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್:
ಕಚೇರಿ: ರೂ. 22,42,320, ಗೃಹ ಕಚೇರಿ: 24,86, 921 | ಒಟ್ಟು: ರೂ. 47.29 ಲಕ್ಷ
ಉಪ ಮುಖ್ಯಮಂತ್ರಿ ಮನೀಸ್ ಸಿಸೊದಿಯಾ:
ಕಚೇರಿ: ರೂ. 5,62,125, ಗೃಹ ಕಚೇರಿ: 5,66,304 | ಒಟ್ಟು: ರೂ.11.28 ಲಕ್ಷ
(ಮಾಜಿ) ಸಾರಿಗೆ ಸಚಿವ ಗೋಪಾಲ್ ರೈ:
ಕಚೇರಿ: ರೂ. 5,44,856, ಗೃಹ ಕಚೇರಿ: 5,61,416 | ಒಟ್ಟು: ರೂ. 11 ಲಕ್ಷ
(ಮಾಜಿ) ಸಮಾಜ ಕಲ್ಯಾಣ ಸಚಿವ ಗೋಪಾಲ್ ರೈ:
ಕಚೇರಿ: ರೂ. 4,97,346, ಗೃಹ ಕಚೇರಿ: 4,13,,833 | ಒಟ್ಟು: ರೂ. 9 ಲಕ್ಷ
ಆರೋಗ್ಯ ಸಚಿವ ಸತ್ಯೇಂದ್ರ ಜೈನ್:
ಕಚೇರಿ: ಒಟ್ಟು: ರೂ.9 ಲಕ್ಷ
ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ:
ಒಟ್ಟು ರೂ. 6.30 ಲಕ್ಷ
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಇಮ್ರಾನ್ ಹುಸೇನ್:
ಒಟ್ಟು ರೂ. 5.8 ಲಕ್ಷ
Discussion about this post