ಶನಿವಾರಸಂತೆ, ಅ.18: ವೀರಶೈವ ಧರ್ಮ ಇಡೀ ವಿಶ್ವಕ್ಕೆ ತನ್ನದೆಯಾದ ಸಾಮಾಜಿಕ ಮೌಲ್ಯ, ಸಮಾನತೆ, ತತ್ವ-ಸಿದ್ದಾಂತಗಳ ಚಿಂತನೆ ಹಾಗೂ ವೈಚಾರಿಕತೆಯ ಕೊಡುಗೆಯನ್ನು ನೀಡಿದ ಐತಿಹಾಸಿಕ ಮತ್ತು ಸಾಮಾಜಿಕ ಧರ್ಮವಾಗಿದೆ’ ಎಂದು ರಾಜ್ಯ ಪೌರಾಡಳಿತ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಅವರು ಕೊಡ್ಲಿಪೇಟೆ ಕಿರಿಕೊಡ್ಲಿ ಮಠ ವಿದ್ಯಾಸಂಸ್ಥೆಯ ವೇದಿಕೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ವೀರಶೈವ ಬಾಂಧವರ ಸಮಾವೇಶದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ವೀರಶೈವ ಸಮಾಜ 12ನೇ ಶತಮಾನದ ಹಿಂದಿನಿಂದ ಮೊದಲುಗೊಂಡು ದೇಶ ಸ್ವತಂತ್ರಗೊಂಡ ನಂತರದ ಇಂದಿನ ದಿನದ ವರೆಗೂ ಸಮಾಜಕ್ಕೆ ತತ್ವ ಸಾರಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಕಾಯಕವನ್ನು ಮಾಡುತ್ತಿದೆ, ವೀರಶೈವ ಧರ್ಮ ಬಸವಣ್ಣರು ಸಾರಿದ ಸಿದ್ದಾಂತಗಳ ನೆಲೆಗಟ್ಟಿನಲ್ಲಿ ತನ್ನದೆಯಾದ ಕಾಯಕವನ್ನು ಮಾಡುತ್ತಿದೆ, ವಚನ ಸಾಹಿತ್ಯಗಳ ಮೂಲಕ ಸಮಾಜದಲ್ಲಿರುವ ಮೌಢ್ಯಗಳು, ಸಮಾನತೆ, ವೈಚಾರಿಕತೆ ಮುಂತಾದ ಚಿಂತನೆಗಳ ಮೂಲಕ ಸಮಾಜವನ್ನು ಬಡಿದೆಬ್ಬಿಸುವ ಏಕೈಕ ಧರ್ಮವಾಗಿದೆ ಎಂದರು. ವೀರಶೈವ ಧರ್ಮ ಸಮಾಜದಲ್ಲಿರುವ ಇತರೆ ಧರ್ಮಗಳಿಗಿಂತಲೂ ವಿಭಿನ್ನವಾಗಿದೆ, ಸಂಸ್ಕೃತಿ-ಪರಂಪರೆಯನ್ನು ಹೊಂದಿದೆ ಎಂದರು.
ಸಮಾಜ ಆಧುನಿಕತೆಗೆ ಬದಲಾಗುವುದು ಸಹಜ ಆದರೆ ವೀರಶೈವ ಸಮಾಜ ಆಧುನಿಕತೆಗೆ ಹೊಂದಿಕೊಂಡು ವೈಚಾರಿಕತೆಯ ಬದಲಾವಣೆಯ ಜೊತೆಯಲ್ಲಿ ವೈಜ್ಞಾನಿಕ, ಶೈಕ್ಷಣಿಕವಾಗಿಯೂ ಅಭಿವೃದ್ದಿ ಸಾಧಿಸಿದೆ, ಈ ನಿಟ್ಟಿನಲ್ಲಿ ಯುವ ಜನಾಂಗ ವೀರಶೈವ ಲಿಂಗಾಯಿತ ಸಮೂದಾಯವನ್ನು ಬಲಪಡಿಸಲು ಪ್ರಯತ್ನಿಸಬೇಕು, ಸಮಾಜದಲ್ಲಿ ಮಾನವ ಸಂಪನ್ಮೂಲ ಪ್ರಮುಖ ಪಾತ್ರವಹಿಸುತ್ತದೆ, ವೀರಶೈವ ಸಮಾಜ ಬಡ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ್ತ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುತ್ತಿದೆ, ಇಂತಹ ಸಂದರ್ಭದಲ್ಲಿ ವೀರಶೈವ ಸಮಾಜ ಸಮಾಜದಲ್ಲಿರುವ ಇತರೆ ಸಮೂದಾಯದ ಬಡವರ್ಗದ ಜನರಿಗೆ ಶೈಕ್ಷಣಿಕವಾಗಿಯೂ, ಆರ್ಥಿಕವಾಗಿಯೂ ಸಹಾಯವನ್ನು ನೀಡುವ ಕಾರ್ಯವನ್ನು ಮಾಡುತ್ತಿದೆ ಎಂದರು. ವೀರಶೈವ ಸಮಾಜದ ಯುವಕ-ಯುವತಿಯರು ಪಾಶ್ಚ್ಯಮಾತ್ಯ ಸಂಸ್ಕೃತಿಗೆ ಒಳಗಾಗದೆ ತಮ್ಮ ಧರ್ಮ, ಸಿದ್ದಾಂತಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು, ವೀರಶೈವ ಕೊಡಗು ಜಿಲ್ಲೆ ಐತಿಹಾಸಿಕ ಕುರುಹು ಹೊಂದಿರುವ ಜಿಲ್ಲೆಯಾಗಿದೆ, ಜಿಲ್ಲೆಗೆ ವೀರಶೈವ ಸಮೂದಾಯದ ರಾಜರು ಆಳ್ವಿಕೆಯನ್ನು ನೀಡಿದ್ದಾರೆ, ವೀರಶೈವ ಸಮಾಜದ ಅಭಿವೃದ್ದಿಗೆ ಸಮೂದಾಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ನಮ್ಮ ದೇಶ ಅಧ್ಯಾತ್ಮಿಕ ಚಿಂತನೆಯಲ್ಲಿ ಜಗತ್ತಿಗೆ ಶ್ರೀಮಂತ ದೇಶವಾಗಿದೆ, ಅಧ್ಯಾತ್ಮಿಕತೆಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಹೊಂದಿದೆ, ಅದೇರೀತಿಯಲ್ಲಿ ವೀರಶೈವ ಸಮಾಜ ಸಮಾಜಿಕ ಮೌಲ್ಯ, ಸಮಾಜದಲ್ಲಿರುವ ಇತರೆ ಸಮೂದಾಯವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ ಎಂದರು. ಭಾರತ ದೇಶದ ಅಧ್ಯಾತ್ಮಿಕ ಚಿಂತನೆ, ಸಂಸ್ಕೃತಿ, ಸಹನೆ ಮನೋಭಾವನೆ, ಸಾಧಕರು, ಮೇಧಾವಿಗಳಿದ್ದು ಇದರಿಂದ ವಿಶ್ವದಲ್ಲಿರುವ ಇತರೆ ದೇಶಗಳ ನಮ್ಮ ದೇಶದತ್ತ ನೋಡುತ್ತಿದೆ, ನಮ್ಮ ದೇಶದಲ್ಲಿ ಉತ್ತಮ ಮೌಲ್ಯಗಳನ್ನು ಹೊಂದಿರುವ ಶಿಕ್ಷಣದ ವ್ಯವಸ್ಥೆ ಇದೆ, ಇದಕ್ಕೆ ಅಧ್ಯಾತ್ಮಿಕ ಮತ್ತು ಸಂಸ್ಕೃತಿ ಮೌಲ್ಯಗಳಿಂದ ಸಾಧ್ಯವಾಗಿದೆ, ಈ ನಿಟ್ಟಿನಲ್ಲೂ ವೀರಶೈವ ಸಮಾಜ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿದೆ ಎಂದರು.
ಕೊಡಗು ಅನೇಕ ವೈಶಿಷ್ಠ್ಯತೆಯನ್ನು ಹೋದಿರುವ ಜಿಲ್ಲೆಯಾಗಿದೆ, ನಮ್ಮ ದೇಶಕ್ಕೆ ಸೈನಿಕರನ್ನು ಕೊಟ್ಟ ನಾಡಾಗಿದೆ, ವೀರಶೈವ ರಾಜರು ಆಳ್ವಿಕೆಯನ್ನು ನಡೆಸಿರುವುದರಿಂದ ಐತಿಹಾಸಿಕವಾಗಿಯೂ ಶ್ರೀಮಂತವಾಗಿದೆ ಆದರೆ ಈ ವರ್ಷ ರಾಜ್ಯ ಭೀಕರ ಬರಗಾಲವನ್ನು ಎದುರಿಸುತ್ತಿದೆ, ಮುಂದಿನ ದಿನದಲ್ಲಿ ರಾಜ್ಯದ ಜನತೆ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡ ಬೇಕಾಗುತ್ತದೆ, ಕೊಡಗು ಜಿಲ್ಲೆಯೂ ಬರಗಾಲಕ್ಕೆ ಹೊರತಾಗಿಲ್ಲ, ಸರಕಾರ ಜಿಲ್ಲೆ 2 ತಾಲೋಕನ್ನು ಬರಗಾಗ ಎಂದು ಘೋಷಣೆ ಮಾಡಿದೆ, ಆದರೆ ಜಿಲ್ಲೆ ಸೋಮವಾರಪೇಟೆ ತಾಲೋಕು ಸಹ ತೀವ್ರ ಬರಗಾಲವನ್ನು ಎದುರಿಸುತ್ತಿದೆ, ಈ ಹಿನ್ನೆಲೆಯಲ್ಲಿ ಈ ತಾಲೋಕನ್ನು ಸಹ ಸರಕಾರ ಬರಗಾಲ ಪ್ರದೇಶ ತಾಲೂಕು ಎಂದು ಘೋಷಣೆ ಮಾಡುವಂತೆ ನಾನು ಸರಕಾರವನ್ನು ಒತ್ತಾಯಿಸುತ್ತೇನೆ ಎಂದರು.ಕೇಂದ್ರ ಸರಕಾರ ನಮ್ಮ ರಾಜ್ಯದ ಬರಗಾಲ ಸಮಸ್ಯೆ ಸೇರಿದಂತೆ ಕಾವೇರಿ ಮತ್ತು ಮಹದಾಯಿ ಸಮಸ್ಯೆಗಳಿಗೆ ಸಹಕಾರ ನೀಡುತ್ತದೆ, ಈ ಸಮಸ್ಯೆಗಳ ಬಗ್ಗೆ ನಾನು ಪ್ರದಾನಿ ನರೇಂದ್ರಮೋದಿ ಅವರಿಗೆ ಸಲಹೆ ನೀಡುತ್ತೇನೆ, ಇಂತಹ ಸಮಸ್ಯೆಗಳಿಗೆ ಪಕ್ಷ ಬೇಧ ಮರೆತು ಎಲ್ಲಾರು ಒಟ್ಠಗಿ ಸಹಕಾರ ನೀಡಿದರೆ ಮಾತ್ರ ಸಮಸ್ಯೆಗಳು ಬಗೆಹರಿಯುತ್ತದೆ ಎಂದರು.
ಮಾಜಿ ಸಚಿವ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ವೀರಶೈವ ಸಮಾಜದ ಬಾಂಧವರ ಸರ್ವಾಂಗಿಣಿಯ ಅಭಿವೃದ್ದಿಗಾಗಿ ಮತ್ತು ಸಮೂದಾಯದ ಬಾಂಧವರನ್ನು ಮುಖ್ಯ ವಾಹಿನಿ ತರಬೇಕೆಂಬ ಉದ್ದೇಶದಿಂದ ವೀರಶೈವ ಮಹಾಸಭಾವನ್ನು ಸ್ಥಾಪಿಸಲಾಗಿದೆ, ಅಲ್ಲದೆ ವೀರಶೈವ ಸಮಾಜದ ಬಡವರ್ಗದ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಟ್ರಸ್ಟ್ ಸ್ಥಾಪಿಸಲಾಗಿದೆ, ಒಟ್ಟು 12 ಕೋಟಿಯನ್ನು ಟ್ರಸ್ಟಿನಲ್ಲಿ ವಿನಿಯೋಗಿಸಿ ರಾಜ್ಯದಲ್ಲಿ ವೀರಶೈವ ಬಾಂಧವರ ಶಿಕ್ಷಣ, ವಸತಿ ಸೌಲಭ್ಯ, ಇಂಜಿನಿಯರ್, ಮೆಡಿಕಲ್ ಶಿಕ್ಷಣ ಮತ್ತು ಇತರೆ ಸಹಾಯಕ್ಕಾಗಿ ನೆರವು ನೀಡುತ್ತಿದೆ, ಇದರಲ್ಲಿ 2 ಕೋಟಿ ರೂ ಹಣದಲ್ಲಿ ರಾಜ್ಯದಲ್ಲಿರುವ ಅಕ್ಷರ ಮತ್ತು ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳಿಗೆ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ನೆರವು ನೀಡಲಾಗುತ್ತಿದೆ, ಈ ನಿಟ್ಟಿನಲ್ಲಿ ವೀರಶೈವ ಸಮಾಜದ ಅಭಿವೃದ್ದಿಗಾಗಿ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಲು ಮಹಾಸಭಾ ನಿರ್ಣಯಿಸಿದೆ, ಈ ಹಿನ್ನೆಲೆಯಲ್ಲಿ ಜಿಲ್ಲಾ ಘಟಕ ಸಹಕಾರ ನೀಡಬೇಕಾಗಿದೆ ಎಂದರು.
ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕೊಡಗು ಜಿಲ್ಲೆ 16ನೇ ಶತಮಾನದ ಹಿಂದಿನ ಇತಿಹಾಸವನ್ನು ಹೊಂದಿದೆ, 16 ನೇ ಶತಮಾನದಲ್ಲಿ ವೀರಶೈವ ಸಮಾಜದ ಹಾಲೇರಿ ವಂಶಸ್ಥರು ಆಳ್ವಿಕೆ ನಡೆಸುವುದರ ಮೂಲಕ ವೀರಶೈವ ಸಮಾಜದ ಉದ್ದಾರಕ್ಕಾಗಿ ನಾಂದಿ ಹಾಡಿದರು. 1586 ರಿಂದ 1806 ತನಕ ಕೊಡಗಿನ ರಾಜರು ಆಳ್ವಿಕೆ ನಡೆಸಿರುವ ಕುರುಹು ಒಳಗೊಂಡಿದೆ, ಈ ನಿಟಿನಲ್ಲಿ ಜಿಲ್ಲೆಯ ವೀರಶೈವ ಸಮಾಜದ ಉದ್ದಾರಕ್ಕಾಗಿ ಜಿಲ್ಲೆಯಲ್ಲಿರುವ ವೀರಶೈವ ರಾಜರ ಅರಮನೆ, ರಾಜರ ಸ್ಮಾರಕಗಳನ್ನು ಜೀರ್ಣೋದ್ದಾರ ಮಾಡಬೇಕಾಗಿದೆ, ವೀರಶೈವ ಸಮಾಜದ ಬಾಂಧವರಿಗಾಗಿ ಕೇಂದ್ರ ಸಮೂದಾಯ ಭವನವನ್ನು ನಿರ್ಮಿಸಿಕೊಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಮಹಾಸಭಾದ ರಾಜ್ಯ ಕಾರ್ಯದರ್ಶಿ ಬಿ.ಎಸ್. ವಾಗೀಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ವೀರಶೈವ ಸಮಾಜ ಸಮಾಜದ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದೆ, ಆದರೆ ವೀರಶೈವ ಸಮಾಜವನ್ನು ಕೆಣಕಿದರೆ ನಮ್ಮ ಸಮೂದಾಯ ಪ್ರಾಣಕೊಡಲು ಸಿದ್ದರಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿಹಕ್ಕು ಆಯೋಗದ ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ, ಉಚ್ಚನ್ಯಾಯಲಯದ ನಿವೃತ್ತ ಸರಕಾರಿ ಆಬಿಯೋಜಕ ಎಚ್.ಎಸ್. ಚಂದ್ರಮೌಳಿ ಮಾತನಾಡಿದರು. ವೇದಿಕೆಯಲ್ಲಿ ವಿವಿಧ ಮಠಗಳ ಮಠಾದೀಶರು, ಜಿಲ್ಲಾ ಘಕಕದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಕೇಂದ್ರ ಮಹಿಳಾ ಘಟಕದ ಗೀತಜಯಂತ್, ಸುವರ್ಣಚಿನ್ನಣ್ಣ, ಪ್ರಮುಖರಾದ ಉಷಾತೇಜಶ್ವಿ, ಬಿ.ಕೆ. ಯತೀಶ್, ಕೆ.ಎನ್. ಸಂದೀಪ್. ಸಿ.ವಿ. ವಿಶ್ವನಾಥ್, ವರಪ್ರಸಾದ್, ಎಸ್. ಮಹೇಶ್, ಕಾಂತರಾಜು ಮುಂತಾದವರಿದ್ದು
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಷ್ಕಾರ ನೀಡಿ ಗೌರವಿಸಲಾಯಿತು, ಸಮೂದಾಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
Discussion about this post