ಹೈದರಾಬಾದ್: ಸೆ:18: ವಿಶ್ವದಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತಲೇ ಇರುತ್ತವೆ, ಆಗ್ಗಾಗ್ಗ ಜನರನ್ನು ಚಕಿತಗೊಳಿಸುವ ನಿದರ್ಶನಗಳೂ ಇವೆ.
ತೆಲಂಗಾಣದ ಕರೀಂನಗರ ಜಿಲ್ಲೆಯ, ಸಿರಿಸಿಲ್ಲಾದ ಶಾಂತಿನಗರ ಬಡಾವಣೆಯಲ್ಲಿ ಮನೆಯೊಂದರ ಎದುರು ಇರುವ ಬೇವಿನ ಗಿಡ ಗಿರಗಿರನೆ ತಿರುಗುತ್ತಿದೆ. ಹೀಗೆ ಬೇವಿನ ಗಿಡ ತಿರುಗುವುದನ್ನು ನೋಡಲು ಜನಜಾತ್ರೆಯೇ ನೆರೆದಿದ್ದು, ನೋಡುಗರನ್ನು ಚಕಿತಗೊಳಿಸಿದೆ. ಇದು ದೇವರ ಪವಾಡ ಇರಬಹುದೆಂದು ನಂಬಿದ ಇಲ್ಲಿನ ಜನ ಪೂಜೆ- ಪುನಸ್ಕಾರ ಮಾಡಿದ್ದಾರೆ. ಕಳೆದ 2 ದಿನಗಳಿಂದ ಬೇವಿನ ಗಿಡ ನಿರಂತರವಾಗಿ ಗಿರಗಿಟ್ಲೆಯಂತೆ ತಿರುಗುತ್ತಿದೆ.
ತನ್ನಿಂತಾನೇ ತಿರುಗುತ್ತಿರುವ ಈ ಬೇವಿನಗಿಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ.
ಭೂಮಿಯಲ್ಲಿನ ಚಲನೆಯಿಂದ ಈ ರೀತಿ ಆಗಿರಬಹುದೆಂದು ಭೂಗರ್ಭ ಶಾಸ್ತ್ರಜ್ಞರು ಹೇಳಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
Discussion about this post