Read - < 1 minute
ಬುಲಂದ್ಷಹರ್, ಆ.31: ಆರು ತಿಂಗಳ ಕಾಲ ಅತ್ಯಾಚಾರಕ್ಕೆ ಒಳಗಾಗಿ ಬಲವಂತ ಗರ್ಭಪಾತದಿಂದ ನಲುಗಿಹೋದ ಅಪ್ರಾಪ್ತೆಯೊಬ್ಬಳು ಚೀಲದಲ್ಲಿ ಭ್ರೂಣದೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಹೃದಯ ಕಲಕುವ ಘಟನೆ ಇಲ್ಲಿ ನಡೆದಿದೆ. ತಾಯಿ ಮತ್ತು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಜನತೆಯನ್ನು ಬೆಚ್ಚಿ ಬೀಳಿಸಿದ್ದ ಬುಲಂದ್ಷಹರ್ ನಗರದಲ್ಲಿ ಮತ್ತೊಂದು ಘೋರ ಘಟನೆ ವರದಿಯಾಗಿದೆ.
14 ವರ್ಷದ ಬಾಲಕಿ ಆರು ತಿಂಗಳ ಕಾಲ ಅತ್ಯಾಚಾರ ನಡೆಸಿ ಗರ್ಭಪಾತ ಮಾಡಿಸಿದ ಯೂನಸ್ ಅಹಮದ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಈತನಿಂದ ಅತ್ಯಾಚಾರಕ್ಕೆ ಒಳಗಾಗಿ ಹೊಟ್ಟೆನೋವಿನಿಂದ ನರಳುತ್ತಿದ್ದ ಅಪ್ರಾಪ್ತೆ ಗರ್ಭಿಣಿಯಾಗಿರುವುದನ್ನು ತಿಳಿದ ಈತ ಮಂತ್ರವಾದಿಯೊಬ್ಬನಿಂದ ಗರ್ಭಪಾತ ಮಾಡಿಸಿದ. ಹೊರಗೆ ತೆಗೆಯಲಾದ ಭ್ರೂಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಬುಲಂದ್ಷಹರ್ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಇಡೀ ಘೋರ ಘಟನೆಯ ವೃತ್ತಾಂತ ಬೆಳಕಿಗೆ ಬಂದಿತು.
Discussion about this post