Read - < 1 minute
ಬೆಂಗಳೂರು, ಅ.9: ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮಹಾ ಮೆರವಣಿಗೆಯನ್ನು ದೂರದರ್ಶನ ಬೆಂಗಳೂರು ಕೇಂದ್ರವು ಡಿಡಿ ಭಾರತಿ ಹಾಗೂ ಡಿಡಿ ಇಂಟರ್ ನ್ಯಾಷನಲ್ ಮತ್ತು ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ.
ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ವೀಕ್ಷಕ ವಿವರಣೆ ನೀಡಲಿದ್ದು, ಮೈವಿವಿ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ನಾಗಣ್ಣ, ಬೆಂಗಳೂರು ವಿವಿ ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ.ಬಿ.ಕೆ. ರವಿ ಇಂಗ್ಲಿಷ್ ನಲ್ಲಿ, ಆಹಾರ ಇಲಾಖೆಯ ಉಪನಿರ್ದೇಶಕ ಕಾ. ರಾಮೇಶ್ವರಪ್ಪ, ಡಾ.ವಿ. ರಂಗನಾಥ್, ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಮಾದೇವ್ ಭರಣಿ ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡುವರು.
ಈ ಬಾರಿಯು 9 ಸುಸಜ್ಜಿತ ಅಂತರ್ರಾಷ್ಟ್ರೀಯ ಮಟ್ಟದ ಕ್ಯಾಮೆರಾಗಳನ್ನು ಬಳಸಲಾಗುತ್ತಿದ್ದು, 60 ದೇಶಗಳಿಗೆ ನೇರ ಪ್ರಸಾರವಾಗಲಿದೆ. ಈ ನೇರ ಪ್ರಸಾರದಲ್ಲಿ ದೂರದರ್ಶನದ 60 ನುರಿತ ಸಿಬ್ಬಂದಿ ಕಾರ್ಯ ನಿರ್ವಹಿಸುವರು.
Discussion about this post