Read - < 1 minute
ಸ್ವತಂತ್ರ ಭಾರತಕ್ಕೊಂದು ಸಂವಿಧಾನ ಜಾರಿಯಾದ ಮೇಲೆ ಈ ನೆಲದ ಕಾನೂನಿನ ಮುಂದೆ ಯಾವುದೇ ರೀತಿಯ ಲಿಂಗ, ಜಾತಿ, ಧರ್ಮ ಸೇರಿದಂತೆ ವಿವಿಧ ಆಧಾರದ ಮೇಲೆ ಭೇದ ಮಾಡುವಂತಿಲ್ಲ ಹಾಗೂ ಎಲ್ಲ ರಿಗೂ ಸಮಾನ ನ್ಯಾಯ ದೊರೆಯಬೇಕು ಎಂಬುದು ಜಾರಿಯಾಗಿದೆ.
ಆದರೆ, ಈ ದೇಶದಲ್ಲಿ ಪ್ರತಿಯೊಂದು ಬೆಳವಣಿ ಗೆಯೂ ಜಾತಿ ಹಾಗೂ ಧರ್ಮದ ಆಧಾರದಲ್ಲೇ ನಡೆ ಯುತ್ತಿದೆ ಎನ್ನುವುದು ಎಷ್ಟು ಸತ್ಯವಾಗಿದೆಯೋ, ಇದ ಕ್ಕೆಲ್ಲಾ ವೋಟ್ ಬ್ಯಾಂಕ್‌ನ ಸ್ವಾರ್ಥ ರಾಜಕೀಯವೇ ಕಾರಣ ಎಂಬುದೂ ಅಷ್ಟೇ ಸತ್ಯ. ಈ ನಿಟ್ಟಿನಲ್ಲಿ ನೋಡುವುದಾದರೆ, ಮುಸ್ಲಿಂರಲ್ಲಿ ತ್ರಿವಳಿ ತಲಾಖ್ ನಿಷೇಧದ ಕುರಿತು ಚರ್ಚೆ ನಡೆಯುತ್ತಿರುವಂತೆಯೇ ಈ ಕುರಿತು ಪ್ರಧಾನಿ ಮೋದಿ ನಿನ್ನೆ ಆಡಿರುವ ಮಾತುಗಳು ಅಕ್ಷರಶಃ ಸತ್ಯವಾದುದು.
ಇಲ್ಲಿ ತ್ರಿವಳಿ ತಲಾಖ್ ಎಂಬ ವಿಚಾರ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಯ ವಿಚಾರವೇ ಹೊರತು, ಧರ್ಮದ ವಿಚಾರ ಮುಖ್ಯವಲ್ಲ. ಯಾವುದೇ ಧರ್ಮಕ್ಕೆ ಸೇರಿದ್ದರೂ ಹೆಣ್ಣು ಹೆಣ್ಣೇ, ಅವಳಿಗೆ ಸಿಗಬೇಕಾದ ಸಮಾನ ನ್ಯಾಯ ದೊರೆಯಲೇ ಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ, ದೂರವಾಣಿ, ಪತ್ರಗಳ ಮೂಲಕ ತಲಾಖ್ ನೀಡುವುದು ಎಂದರೆ ಅದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕಾರ್ಯವಾಗುತ್ತದೆ.
ಯಾವುದೇ ನಾಗರಿಕ ಸಮಾಜದಲ್ಲಿ ಗಂಡಿಗೂ, ಹೆಣ್ಣಿಗೂ ಸಮಾನ ನ್ಯಾಯ ದೊರೆಯಲೇಬೇಕು. ಆದರೆ, ಇಲ್ಲಿ ಗಂಡಿಗೆ ಎಷ್ಟಾದರೂ ಮದುವೆಯಾಗುವ ಅವಕಾಶವಿದೆ, ಅದೇ ಹೆಣ್ಣಿಗೆ ತ್ರಿವಳಿ ತಲಾಖ್ ನೀಡಿ ಮುಕ್ತಿ ಪಡೆದುಕೊಳ್ಳಬಹುದು ಎಂದರೆ, ಆಕೆಯ ಮುಂದಿನ ಜೀವನದ ಗತಿಯೇನಾಗುತ್ತದೆ?
ಪ್ರಮುಖವಾಗಿ ಇಲ್ಲಿ ತಲಾಖ್ ವಿಚಾರದ ಹೆಣ್ಣಿನ ಮೇಲಿನ ಶೋಷಣೆಯನ್ನು ತಪ್ಪಿಸುವುದಾಗಿದೆಯೇ ಹೊರತು ಯಾವುದೇ ಧರ್ಮದ ವಿರುದ್ಧವಲ್ಲ ಎಂಬು ದನ್ನು ಅರಿಯಬೇಕು. ಮುಸ್ಲಿಂ ಮಹಿಳೆಗೆ ಪೋನ್‌ನಲ್ಲಿ ತಲಾಖ್ ಹೇಳಿ ಆಕೆಯ ಜೀವನವನ್ನು ಡೋಲಾಯ ಮಾನಗೊಳಿಸಬಹುದಾದರೆ, ನಾಗರಿಕ ಸಮಾಜಕ್ಕೆ ಅದು ಹೇಗೆ ಶೋಭೆ ಎನಿಸಿಕೊಳ್ಳುತ್ತದೆ? ಮುಸ್ಲಿಂ ಧರ್ಮದಲ್ಲಿ ವಿವಿಧ ಕಾರ ಣಗಳಿಗಾಗಿ ಹಿಂದೆ ಈ ಪದ್ದತಿಯನ್ನು ಜಾರಿಗೆ ತಂದಿರಬಹುದು. ಆದರೆ, ಇಂದು ಕಾಲ ಬದ ಲಾಗಿದೆ. ಅತ್ಯಾಧು ನಿಕತೆಯತ್ತ ಪ್ರಪಂಚ ಸಾಗುತ್ತಿರು ವಂತೆಯೇ ಧರ್ಮ ದೊಳಗಿನ ಕೆಲವೊಂದು ಕಟ್ಟು ಪಾಡುಗಳನ್ನು ಮಾರ್ಪಾಡು ಮಾಡಿಕೊಂಡು ಮುನ್ನ ಡೆಯಬೇಕು. ಹೀಗಾಗಿ, ತ್ರಿವಳಿ ತಲಾಖ್ ನಿಷೇಧಿಸುವ ವಿಚಾರದಲ್ಲಿ ಸುಧಾರಣೆ ಬಯಸುವ ಮುಸ್ಲಿಂ ಮುಖಂ ಡರು ಮುಂದೆ ಬರಬೇಕು. ಹಾಗೂ ತ್ರಿವಳಿ ತಲಾಖ್ ನಿಷೇಧ ವಿಚಾರ ಹೆಣ್ಣಿನ ಮೇಲೆ ಆಗುವ ಶೋಷಣೆ ಯನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದೆಯೇ ಹೊರತು ಮುಸ್ಲಿಂ ಧರ್ಮವನ್ನು ಅಲುಗಾಡಿಸುವ ಅಥವಾ ಯಾರದ್ದೇ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ಹೊಂದಿಲ್ಲ ಎನ್ನುವುದನ್ನು ಅರಿಯಬೇಕು.
ಇದೇ ವೇಳೆ ಬದಲಾವಣೆ ಬಯಸುವ ಮುಸಲ್ಮಾನರು ಈ ವಿಚಾರದಲ್ಲಿ ಮುಂದೆ ಬಂದು, ಇದರಲ್ಲಿ ರಾಜ ಕೀಯ ಸ್ವಾರ್ಥವನ್ನು ಬೆರೆಸುತ್ತಿರುವ ದುಷ್ಟರನ್ನು ದೂರ ವಿಟ್ಟು, ಮುಸಲ್ಮಾನ ಹೆಣ್ಣು ಮಕ್ಕಳ ಜೀವನ ಹಸನಾಗು ವಂತೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮುಸಲ್ಮಾ ನರು ಚಿಂತಿಸಬೇಕು.
ಫೈನಲ್ ಥಾಟ್: ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳಿಗೆ ತಲಾಖ್ ನೀಡುವ ಮುನ್ನ, ನಿಮ್ಮ ಮನೆಯ ಹೆಣ್ಣು ಮಕ್ಕಳನ್ನೂ ಮತ್ತೊಂದು ಮನೆಗೆ ಕಳುಹಿಸಿದ್ದೀರಿ ಎಂಬುದನ್ನು ಚಿಂತಿಸಿ.
Discussion about this post