ಮುಂಬೈ. ಸೆ.8: ಮುಂಬೈ ವಿಶೇಷ ಮಹಿಳಾ ನ್ಯಾಯಾಲಯ 2013ರ ನರ್ಸ್ ಪ್ರೀತಿ ಮೇಲಿನ ಆಸಿಡ್ ದಾಳಿ ಪ್ರಕರಣ ಸಂಬಂಧ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ವಿಶೇಷ ನ್ಯಾಯಮೂರ್ತಿ ಎ.ಎಸ್ ಶಿಂಧೆ ಪೀಠ ಅಪರಾಧಿ ಅಂಕುರ್ ಲಾಲ್ ಪನ್ವಾರ್ (26)ಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ನರ್ಸ್ ಪ್ರೀತಿ ರಥಿ 2013ರಲ್ಲಿ ಆಸಿಡ್ ದಾಳಿಗೊಳಗಾಗಿದ್ದರು. ಇದರಿಂದ ಆಂತರಿಕ ಗಾಯ ಹಾಗೂ ಬಹು ಅಂಗಾಗಳ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.ಆಸಿಡ್ ದಾಳಿ ಪ್ರಕರಣ ಮಹಿಳೆಯರ ವಿರುದ್ಧ ನಡೆಯುವ ಗಂಭೀರ ಅಪರಾಧವಾಗಿದ್ದು, ಪೂರ್ವ ಯೋಜಿತವಾದಿ ಅಪರಾಧಿ ದಾಳಿ ನಡೆಸಿದ್ದಾನೆಂದು ಕೋರ್ಟ್ ಹೇಳಿದೆ. ಈ ಸಂಬಂಧ ಸರ್ಕಾರಿ ಪರ ವಕೀಲರಾದ ಉಜ್ವಲ್ ನಿಖಮ್ ಅವರು ಇದೊಂದು ವಿರಳಾತಿ ವಿರಣ ಪ್ರಕರಣವಾಗಿದ್ದು, ಆರೋಪಿಗೆ ಮರಣದಂಡನೆಯೇ ಸೂಕ್ತವಾದುದು ಎಂದು ಹೇಳಿದ್ದರು. ಅಲ್ಲದೇ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಿದಲ್ಲಿ ಆತ ಮುಂದೊಮ್ಮೆ ಇಂತಹ ಕೃತ್ಯಗಳನ್ನು ಎಸಗಬಹುದು. ಇದರಿಂದ ಹೆಣ್ಣು ಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಆದರೆ ಆರೋಪಿ ಪರ ವಕೀಲರಾದ ಅಪೇಕ್ಷಾ ವೋಹ್ರಾ ಅವರು ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಕೋರ್ಟ್ ನಲ್ಲಿ ಕೇಳಿಕೊಂಡಿದ್ದರು. ಅಲ್ಲದೇ ಅವನ ಕುಟುಂಬ ಜವಾಬ್ದಾರಿ ಸಂಪೂರ್ಣ ಆತನ ಹೆಗಲಲ್ಲಿದೆ. ದುಡಿದು ಸಂಸಾರ ಪೋಷಿಸುವ ಹೊಣೆ ಆತನದ್ದಾಗಿದೆ. ಆದ್ದರಿಂದ ಶೀಕ್ಷೆ ಪ್ರಮಾಣ ಕಡಿಮೆಗೊಳಿಸಿ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಿದ್ದರು. ಆದರೆ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ತನ್ನ ತೀರ್ಪು ಹೊರಡಿಸಿದೆ. 2013ರಲ್ಲಿ ತನ್ನ ಮನೆಯ ಪಕ್ಕದ ನಿವಾಸಿಯಾಗಿದ್ದ ಪ್ರೀತಿ ರತಿ ಮೇಲೆ ಪನ್ವಾರ್ ಆಸಿಡ್ ದಾಳ ನಡೆಸಿದ್ದ. ಬಳಿಕ ಆರೋಪಿ ಪತ್ತೆ ಹಚ್ಚಿದ ಪೊಲೀಸರು ಆತನನ್ನು ಬಂಧಿಸಿದ್ದು, 98 ಸಾಕ್ಷ್ಯಗಳ ಹೇಳಿಕೆಯನ್ನಾಧರಿಸಿ ತೀರ್ಪು ಪ್ರಕಟ ಮಾಡಿದೆ.
Discussion about this post