Read - < 1 minute
ಮುಂಬೈ: ಸೆ:10: ಮಾದಕ ದ್ರವ್ಯ ಮಾರಾಟ ಜಾಲದಲ್ಲಿ ಕೇಳಿಬಂದಿರುವ ತಮ್ಮ ವಿರುದ್ಧ ಆರೋಪ ಸುಳ್ಳು ಎಂದು ಬಾಲಿವುಡ್ ನಟಿ ಮಮತಾ ಕುಲಕರ್ಣಿ ಹೇಳಿಕೊಂಡಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ, ತಾನು ನಿರಪರಾಧಿ, ತನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.
ಅಲ್ಲದೇ ತಾನು ಕಳೆದ 20 ವರ್ಷಗಳಿಂದ ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡಿದ್ದೇನೆ, ಹಣ,ಸಂಪತ್ತು, ಐಷಾರಾಮಿ ಜೀವನವನ್ನು ತೊರೆದಿದ್ದೇನೆ, ಅಂತಹದರಲ್ಲಿ ಮಾದಕ ದ್ರವ್ಯ ದಂಧೆ ಮಾಡುವ ಅಗತ್ಯ ನನಗಿಲ್ಲ ಎಂದು ಮಮತಾ ಹೇಳಿದ್ದಾರೆ.
ಸದ್ಯ ನನ್ನ ಬಳಿ ಇರುವುದು ಕೇವಲ 25 ಲಕ್ಷ ರೂ ಮಾತ್ರ, ಅದು ತಾನು ಬಾಲಿವುಡ್ ನ ಸಿನಿಮಾಗಳಲ್ಲಿ ನಟಿಸಿ ದುಡಿದಿದ್ದು, ಅದು ಬಿಟ್ಟರೆ ನನ್ನ ಬಳಿ ಹಣವೇ ಇಲ್ಲ ಎಂದು ಮಮತಾ ತಿಳಿಸಿದ್ದಾರೆ.
ಒಟ್ಟು 2000 ಕೋಟಿ ರೂ ಮಾದಕ ದ್ರವ್ಯ ಮಾರಾಟ ಜಾಲದಲ್ಲಿ ಮಮತಾ ಹೆಸರು ಕೇಳಿಬಂದಿತ್ತು. ಈ ಪ್ರಕರಣದಲ್ಲಿ ದೂರು ಕೂಡ ದಾಖಲಾಗಿದೆ.
Discussion about this post