Read - 2 minutes
ಇಂತಹುದ್ದೊಂದು ಅನುಮಾನ ಹರಿದಾಡುತ್ತಿದೆ. ವಿವಿಧ ಕಾರ್ಮಿಕ ಸಂಘಟನೆಗಳು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ಈಗಾಗಲೇ ಸಾಕಷ್ಟು ಬೆಂಬಲ ವಕ್ತವಾಗಿದೆ.
ಬೆಲೆ ಏರಿಕೆ ನಿಯಂತ್ರಣ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ನಿರುದ್ಯೋಗ ತಪ್ಪಿಸಲು ನಿರ್ಧಿಷ್ಟ ಕ್ರಮ, ರಾಷ್ಟ್ರ ವ್ಯಾಪಿ ಏಕರೂಪ ವೇತನ ನಿಗದಿ ಎನ್ನುವುದು ನಾಳಿನ ಮುಷ್ಕರದ ಪ್ರಮುಖ ಬೇಡಿಕೆಗಳಾಗಿವೆ.
ಈ ವಿಚಾರವನ್ನೊಮ್ಮೊ ನೋಡುವುದಾದರೆ, ಕಾರ್ಮಿಕರ ಬೇಡಿಕೆಗಳು ಈಡೇರಲೇಬೇಕು, ಅಸಂ ಘಟಿತ ವಲಯದ ಕಾರ್ಮಿಕರೂ ಸೇರಿದಂತೆ ಕಾರ್ಮಿಕ ವರ್ಗಕ್ಕೆ ಜೀವನ ಭದ್ರತೆ ದೊರೆಯಬೇಕು, ಏಕರೂಪದ ವೇತನ ನಿಗದಿ ಮಾಡಬೇಕು ಎನ್ನುವುದು ಜಾರಿ ಯಾಗಲೇ ಬೇಕಾದ ವಿಚಾರಗಳು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ವಿಚಾರದಲ್ಲಿ ದೇಶದ ಎಲ್ಲ ವರ್ಗದ ಜನತೆ ಇದನ್ನು ಬೆಂಬಲಿಸಲೇಬೇಕು.
ಆದರೆ, ನಾಳಿನ ಮುಷ್ಕರದ ಬೇಡಿಕೆಗಳಲ್ಲಿ ಕೆಲವನ್ನು ಗಮನಿಸಿದರೆ, ಇದರ ಹಿಂದೆ ರಾಜಕೀಯ ದುರುದ್ದೇಶದ ಕೈವಾಡದ ಶಂಕೆ ವ್ಯಕ್ತವಾಗುತ್ತದೆ. ಬೆಲೆ ನಿಯಂತ್ರಣ ಏರಿಕೆಯನ್ನು ತಪ್ಪಿಸಬೇಕು ಎನ್ನುವ ಒಂದು ಬೇಡಿಕೆ ಯನ್ನು ಮುಂದಿಡಲಾಗಿದೆ. ಬೆಲೆ ನಿಯಂತ್ರಣ ಎನ್ನು ವುದು ಕಾರ್ಮಿಕ ವರ್ಗಕ್ಕೆ ಮಾತ್ರವಲ್ಲ, ದೇಶದ ಎಲ್ಲ ವರ್ಗಕ್ಕೂ ಪರಿಣಾಮ ಬೀರುತ್ತದೆ. ಬೆಲೆ ಏರಿಕೆಯಾ ದಂತೆ ಕಾರ್ಮಿಕ ವರ್ಗದ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಸತ್ಯ. ಆದರೆ, ಅದು ಅವರೊ ಬ್ಬರ ಸಮಸ್ಯೆಯಲ್ಲ. ಹಾಗೆಯೇ, ಬೆಲೆ ಏರಿಕೆಯ ಹಿಂದೆ ಜಾಗತಿಕ ಮಟ್ಟದ ವ್ಯಾವಹಾರಿಕ ಸಂಬಂಧಗಳೂ ಪರಿಣಾಮ ಬೀರುವುದರಿಂದ ನಿಯಂತ್ರಣ ಅಷ್ಟು ಸುಲಭವಲ್ಲ ಎನ್ನುವುದನ್ನು ಅರಿಯಬೇಕು.
ಇನ್ನು, ನಿರುದ್ಯೋಗ ತಪ್ಪಿಸಲು ನಿರ್ಧಿಷ್ಟ ಕ್ರಮ ಕೈಗೊಳ್ಳಬೇಕು ಎನ್ನುವುದು ಮತ್ತೊಂದು ಬೇಡಿಕೆ. ಇದರಲ್ಲೂ ಸಹ ನಿರುದ್ಯೋಗ ಕೂಲಿ ಕಾರ್ಮಿಕರಲ್ಲಿ ಮಾತ್ರವಲ್ಲ ಎರಡು, ಮೂರು ಪದವಿ ಪಡೆದ ಮಂದಿಯೂ ಕೆಲಸವಿಲ್ಲದೇ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಹಾಗೆಯೇ, ದೇಶದ ಎಲ್ಲರಿಗೂ ಸರ್ಕಾ ರವೇ ಕೆಲಸ ನೀಡಲು ಸಾಧ್ಯವಿಲ್ಲ. ಅವರವರ ಕೌಶ ಲ್ಯಕ್ಕೆ ತಕ್ಕಂತೆ ಸ್ವಉದ್ಯೋಗ ಕಂಡುಕೊಳ್ಳಬೇಕು, ಇದಕ್ಕಾಗಿ ಹಣಕಾಸಿನ ನೆರವು ನೀಡುವ ಯೋಜನೆ ಗಳನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು.
ಕುಶಲವಲ್ಲದ ಕಾರ್ಮಿಕರಿಗೆ ದಿನಕ್ಕೆ 350 ರೂ. ಕನಿಷ್ಟ ವೇತನವನ್ನು ಕೇಂದ್ರ ನಿಗದಿ ಮಾಡಿದೆ. ಹೊಸ ಬೋನಸ್ ನೀತಿ ಅನುಸಾರ ಕಾರ್ಮಿಕರಿಗೆ ಬೋನಸ್ ಜಾರಿ ಮಾಡಲು ಕೇಂದ್ರ ಒಪ್ಪಿದೆ. ಇದಲ್ಲದೇ ಈ ವಿಚಾ ರದಲ್ಲಿ ವಿವಿಧ ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಶಾಶ್ವತ ಪರಿಹಾರಕ್ಕೆ ಸೂಚಿಸಲಾಗಿದೆ. ಅಂಗನವಾಡಿ, ಆಶಾ, ಬಿಸಿಊಟ ಕಾರ್ಯಕರ್ತೆಯರೂ ಸೇರಿದಂತೆ ಅಸಂಘಟಿಕ ಕಾರ್ಮಿಕ ವಲಯದಲ್ಲಿರುವವರಿಗೆ ಇಎಸ್‌ಐ ಹಾಗೂ ಪಿಎಫ್ ನೀಡಲು ಒಪ್ಪಿಗೆ ಸೂಚಿಸ ಲಾಗಿದೆ ಎನ್ನುವುದು ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯಲ್ಲ ಎನ್ನುವ ಅಂಶವನ್ನು ಸಾಬೀತು ಮಾಡುತ್ತದೆ.
ಇದರೊಂದಿಗೆ ನಾಳಿನ ಮುಷ್ಕರ ವಿಚಾರದ ಸಮಸ್ಯೆ ಯನ್ನು ಪರಿಹಾರ ಮಾಡಲು ಮೋದಿ ಸರ್ಕಾರ ಬಂದಾ ಗಿನಿಂದಲೂ ಒಂದಿಲ್ಲೊಂದು ಪ್ರಯತ್ನಗಳನ್ನು ಮಾಡು ತ್ತಲೇ ಇದೆ. ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಎಷ್ಟು ಪ್ರಯತ್ನಗಳನ್ನು ಮಾಡಬಹುದೇ ಅಷ್ಟನ್ನು ಮಾಡು ತ್ತಲೇ ಇದೆ. ಪ್ರಸ್ತುತ ಕಾರ್ಮಿಕ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಒಬ್ಬರಿಗೆ ೧೨ ಸಾವಿರ ವೇತನ ನೀಡಲಾಗುತ್ತಿದ್ದು, ಪಿಎಫ್, ಇಎಸ್‌ಐ ಸೇರಿ ಅದು ೧೭೫೦೦ ಆಗುತ್ತಿದೆ. ಇದೊಂದು ಉದಾಹರಣೆ ಯಷ್ಟೆ. ಇದನ್ನು ಮುಷ್ಕರ ಉದ್ದೇಶಿತರು ಗಮನಿಸ ಬೇಕು.
ಎಲ್ಲಕ್ಕೂ ಮಿಗಿಲಾಗಿ ಕಾರ್ಮಿಕರ ಎಲ್ಲ ಬೇಡಿಕೆಗಳಿಗೂ ಕೇಂದ್ರ ಸರ್ಕಾರವೇ ಜವಾಬ್ದಾರಿ ಯಲ್ಲ. ರಾಜ್ಯ ಸರ್ಕಾರದ ಪಾತ್ರವೂ ಅಷ್ಟೇ ಮುಖ್ಯ ವಾಗಿರುತ್ತದೆ. ಈ ನಿಟ್ಟಿನಲ್ಲಿ ನಾಳಿನ ಮುಷ್ಕರದ ಬೇಡಿಕೆ ಗಳಲ್ಲಿ ಕೆಲವು ನ್ಯಾಯಯುತವೇ ಆದರೂ, ಇನ್ನುಳಿದ ಕೆಲವು ಬೇಡಿಕೆಗಳು ರಾಜಕೀಯ ಪ್ರೇರಿತ ವಾಗಿವೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
Discussion about this post