ನವೀನ ತಂತ್ರಜ್ಞಾನದ ಮೂಲಕ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಮರು ಸೃಷ್ಟಿಸಿರುವ ಚಿತ್ರ ನಾಗರಹಾವು. ಆರಂಭದಿಂದಲೂ ಸಿನಿಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಈ ಚಿತ್ರ ಯಾವಾಗ ತೆರೆ ಕಾಣುತ್ತದೆ ಎಂಬ ಕುತೂಹಲ ಗರಿಗೆದರಿಕೊಂಡಿತ್ತು. ಇದೀಗ ಈ ವಾರವೇ ನಾಗರಹಾವು ಚಿತ್ರವನ್ನು ತೆರೆ ಕಾಣಿಸಲು ಮುಹೂರ್ತ ನಿಗದಿಯಾಗಿದೆ.
ಹೆಸರಾಂತ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮತ್ತೆ `ನಾಗರಹಾವು’ ಸಿನಿಮಾ ಮೂಡಿ ಬಂದಿದೆ. ನವೀನ ತಂತ್ರಜ್ಞಾನವೊಂದನ್ನು ಬಳಸಿಕೊಂಡು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರನ್ನು `ನಾಗರಹಾವು’ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ತರಲು ಕೋಡಿ ರಾಮಕೃಷ್ಣ ಶ್ರಮ ವಹಿಸಿದ್ದಾರೆ. ಅದೇ ಈ ಚಿತ್ರದ ಮುಖ್ಯ ಆಕರ್ಷಣೆಯೂ ಹೌದು. ಈ ಚಿತ್ರದಲ್ಲಿ ಕ್ವೀನ್ ರಮ್ಯಾ ಹಾಗೂ ದಿಗಂತ್ ಅಭಿನಯಿಸಿದ್ದಾರೆೆ.
ಬ್ಲಾಕ್ ಬಸ್ಟರ್ ಸ್ಟುಡಿಯೋ ಪ್ರೊಡಕ್ಷನ್ ಲಾಂಛಛನದಲ್ಲಿ ಮೂಡಿ ಬಂದಿರುವ ನಾಗರಹಾವು ಚಿತ್ರವನ್ನು ಸಾಜಿದ್ ಖುರೇಷಿ ನಿರ್ಮಾಣ ಮಾಡಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಮರುಸೃಷ್ಟಿಸಲಾಗಿರುವ ಪಾತ್ರದೊಂದಿಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ದಿಗಂತ್, ಸಾಯಿಕುಮಾರ್ ಮುಂತಾದವರು ನಟಿಸಿದ್ದಾರೆ. ಛಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಹೆಚ್.ಸಿ. ವೇಣು ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ. ಇನ್ನುಳಿದಂತೆ ಇಮ್ರಾನ್ ಸರ್ದಾರಿಯಾ ಹಾಗೂ ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ, ರವಿವರ್ಮಾ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಕವಿರಾಜ್ ಅವರ ಸಾಹಿತ್ಯವಿದೆ.
Discussion about this post