ನವದೆಹಲಿ, ಅ.19: ನೊಬೆಲ್ ಮಾದರಿಯಲ್ಲಿ ನೈಮಿಷ್ಯ ಸಮ್ಮಾನ್ ಪ್ರಶಸ್ತಿ ನೀಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸಂಸ್ಕೃತಿ ಇಲಾಖೆ ಒಪ್ಪಿಗೆ ನೀಡಿದೆ.
ಆರ್‌ಎಸ್‌ಎಸ್‌ನ ಸಂಸ್ಕಾರ ಭಾರತಿ ಸಂಘಟನೆ ಈ ಪ್ರಸ್ತಾವ ಸಲ್ಲಿಸಿತ್ತು. ಶಾಂತಿ, ಮಾನವ ಹಕ್ಕು, ಸಾಹಿತ್ಯ, ಕಲೆ, ವಿಜ್ಞಾನ, ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಈ ಪ್ರಶಸ್ತಿ ನೀಡುವ ಇಂಗಿತ ವ್ಯಕ್ತಪಡಿಸಿತ್ತು. ಈ ಪ್ರಶಸ್ತಿ ಸ್ಥಾಪನೆಗೆ ಅನುಮತಿ ಕೋರಿ ಅದು ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಈಗ ಅದಕ್ಕೆ ಅನುಮತಿ ದೊರೆತಿದೆ ಎಂದು ತಿಳಿದುಬಂದಿದೆ.
ವಾರಾಣಸಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದಲ್ಲಿ ಸ್ಥಾಪನಾ ವರ್ಷದ ಅಂದರೆ, ಪ್ರಥಮ ನೈಮಿಷ್ಯ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ. ಇದು ವಾರ್ಷಿಕ ಪ್ರಶಸ್ತಿಯಾಗಿದೆ.
Discussion about this post