Read - < 1 minute
ಬೆಂಗಳೂರು: ಸೆ;9: ಕಾವೇರಿ ವಿವಾದದಲ್ಲಿ ನ್ಯಾಯಾಲಯದ ಆದೇಶ ಪಾಲನೆ ಅನಿವಾರ್ಯವಾಗಿದ್ದು, ಪ್ರತಿಪಕ್ಷಗಳ ಹೇಳಿಕೆ ರಾಜಕೀಯ ಪ್ರೇರಿತವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕಾವೇರಿ ವಿಚಾರದಲ್ಲಿ ನ್ಯಾಯಾಲಯದ ಪಾಲನೆ ಅನಿವಾರ್ಯವಾಗಿತ್ತು, ಈ ಹಿಂದೆ ಹಲವು ಬಾರಿ ತಮಿಳುನಾಡಿಗೆ ನೀರು ಬಿಡಲಾಗಿದೆ ಈಗಲೂ ಹಾಗೆಯೇ ಆಗಿದೆ ಎಂದರು.
ಇನ್ನು ಕೆಆರ್ ಎಸ್ ಪೊಲೀಸ್ ಲಾಠಿಚಾಜರ್್ ಕುರಿತು ಪ್ರತಿಕ್ರಿಯಿಸಿ, ತಳ್ಳಾಟ ವೇಳೆ ಸ್ವಲ್ಪ ತಳ್ಳಿದ್ದಾರೆ, ಅಷ್ಟೆಯೇ ಹೊರತು ಲಾಠಿಚಾಜರ್್ ನಡೆದಿಲ್ಲ ಎಂದು ಸಮಥರ್ಿಸಿಕೊಂಡರು.
ಪಕ್ಕದಲ್ಲೇ ನಾಲೆ ಇದ್ದಿದ್ದರಿಂದ ಉದ್ವೇಗಕ್ಕೊಳಗಾಗಿ ರೈತರಿಂದಾಗುವ ಅನಾಹುತವನ್ನು ತಪ್ಪಿಸಲು ಈ ರೀತಿ ಮಾಡಲಾಗಿದೆ, ಯಾರಿಗೂ ಗಾಯವಾಗಿಲ್ಲ ಎಂದು ಹೇಳಿದರು.
ಇನ್ನು ಬಂದ್ ನಿಂದ ನ್ಯಾಯಾಲಯದ ತೀಪರ್ು ಬದಲಾಗಲ್ಲ ಎಂಬ ಹೇಳಿಕೆಗೆ ಉತ್ತರಿಸಿದ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ, ಜಲಸಂಪನ್ಮೂಲ ಸಚಿವರು ಅವರ ಕೆಲಸ ಮಾಡಿದ್ದಾರೆ, ಅವರು ವಾದ ಮಾಡಲು ಸಾಧ್ಯವೇ, ಕಾನೂನು ತಜ್ಞರೊಂದಿಗೆ ಮಾತಾಡಿದ್ದಾರೆ.
ಎಂದು ಹೇಳಿದರು.
ಇನ್ನು ವಕೀಲ ಪಾಲಿ ನಾರಿಮನ್ ಅವರ ವಜಾಗೆ ಈಶ್ವರಪ್ಪ ಆಗ್ರಹಿಸಿರುವ ಬಗ್ಗೆಯೂ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರೇ ಜಲಸಂಪನ್ಮೂಲ ಸಚಿವರಾಗಿದಾಗ ಏಕೆ ವಕೀಲರನ್ನು ಬದಲಿಸಲಿಲ್ಲ, ದೇವೇಗೌಡರಿಗಿಂತ ಈಶ್ವರಪ್ಪ ಬುದ್ದಿವಂತರೇ? ಎಂದು ಪ್ರಶ್ನಿಸಿದರು.
ಇನ್ನು ಜಿಎಸ್ ಟಿ ಮಸೂದೆ ಸಂಬಂಧ ವಿಶೇಷ ಅಧಿವೇಶನ ಕರೆಯುವ ನಾಳೆ ತುತರ್ು ಸಂಪುಟ ಸಭೆ ಕರೆಯಲಾಗಿದೆ. ಈಗಾಗಲೇ ರಾಷ್ಟ್ರಪತಿ ಅಂಕಿತ ಬಿದ್ದು ಜಿಎಸ್ ಟಿ ಕಾನೂನಾಗಿದೆ, ಈ ಬಗ್ಗೆ ನಾಳೆ ನಿಧರ್ಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಶಾಂತಿಯುತವಾಗಿ ಬಂದ್ ಆಚರಿಸಿದ ಜನತೆಗೆ ಮುಖ್ಯಮಂತ್ರಿ ಧನ್ಯವಾದ ತಿಳಿಸಿದರು.
Discussion about this post