ನವದೆಹಲಿ, ಅ.14: ಮುಂದಿನ ವರ್ಷ ಪಂಜಾಬ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.
ಇಂಡಿಯಾ ಟುಡೆ ಆಯಕ್ಸಿಸ್ ಒಪಿನಿಯನ್ ಪೊಲ್ ನಡೆಸಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ 49ರಿಂದ55 ಸೀಟುಗಳನ್ನು ಪಡೆಯಬಹುದೆಂದು ತಿಳಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ 42ರಿಂದ 46 ಸೀಟುಗಳನ್ನು ಗಳಿಸಬಹದು ಎಂದು ಸಮೀಕ್ಷೆ ತಿಳಿಸಿದೆ.
ಆಡಳಿತರೂಢ ಬಿಜೆಪಿ, ಶಿರೊಮನಿ ಅಕಾಲಿ ದಳ ಮೈತ್ರಿಕೂಟ 17ರಿಂದ 21ಸೀಟುಗಳನ್ನು ಅಷ್ಟೆ ಪಡೆಯಬಹುದು ಎಂದು ಹೇಳಿದೆ.
ಶೇ.22ರಷ್ಟು ವೋಟುಗಳು ಬಿಜೆಪಿ ಮೈತ್ರಿಕೂಟಕ್ಕೆ ಹೋಗಿವೆ. ಈ ಹಿಂದೆ ಈ ವೋಟುಗಳು ಆಪ್ ಪಕ್ಷದ ಪಾಲಗಿದ್ದವು ಎಂದು ತಿಳಿದುಬಂದಿದೆ. ಶೆ19ರಷ್ಟು ವೋಟುಗಳು ಕಾಂಗ್ರೆಸ್ ಪಾಲಾಗಿದೆ. ಸಮೀಕ್ಷೆ 117 ಕ್ಷೇತ್ರ, 6,552 ಜನರ ಮೇಲೆ ನಡೆಸಲಾಗಿತ್ತು.
Discussion about this post