ನವದೆಹಲಿ, ಅ.೨೯: ಪಂಜಾಬಿನ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದಿದ್ದ ದಾಳಿಗೆ ಪಾಕಿಸ್ಥಾನ ಕಾರಣ ಎಂಬ ಭಾರತದ ವಾದವನ್ನು, ಅಮೆರಿಕಾ ಪುಷ್ಟೀಕರಿಸಿದೆ.
ಈ ವರ್ಷದ ಆರಂಭದಲ್ಲಿ ನಡೆದಿದ್ದ ಈ ದಾಳಿಗೆ, ಪಾಕ್ ಉಗ್ರರೇ ಕಾರಣ ಎಂದು ಭಾರತ ಅಂದೇ ಆರೋಪಿಸಿತ್ತು. ಈಗ ಅಮೆರಿಕಾ ನೀಡಿರುವ ಪುರಾವೆಗಳಿಂದ ಪಠಾಣ್‌ಕೋಟ್ ದಾಳಿ ಪಾಕ್ ನೆಲದಿಂದಲೇ ನಡೆದಿತ್ತು ಎಂಬುದು ದೃಢಪಟ್ಟಿದೆ.
ರಾಷ್ಟ್ರೀಯ ತನಿಖಾ ದಳವು ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸುವುದನ್ನು ಪರಿಗಣಿಸುತ್ತಿದೆ.
ಪಠಾಣ್‌ಕೋಟ್ ದಾಳಿ ರೂವಾರಿ ಸಂಘಟನೆ ಪಾಕ್ ಮೂಲದ ಜೈಶ್ ಎ ಮೊಹಮ್ಮದ್ (ಜೆಇಎಂ) ನಿರ್ವಾಹಕರ ಫೇಸ್ ಬುಕ್ ಖಾತೆಯ ಐಪಿ (ಇಂಟರ್‌ನೆಟ್ ಪ್ರೋಟೋಕಾಲ್) ವಿಳಾಸ ಪಾಕಿಸ್ಥಾನದ್ದು. ಈ ಉಗ್ರ ಸಂಘಟನೆಯ ಆರ್ಥಿಕ ಶಕ್ತಿಯಾಗಿರುವ ಅಲ್ ರೆಹಮತ್ ಟ್ರಸ್ಟ್ ಇದರ ವೆಬ್‌ಸೈಟ್‌ನ ಐಪಿ ವಿಳಾಸವು ಪಾಕಿಸ್ಥಾನದಲ್ಲೇ ಇದೆ ಎಂಬುದನ್ನು ದೃಢಪಡಿಸುವ ದಾಖಲೆಗಳು ದೊರೆತಿದೆ. ಇದನ್ನು ಅಮೆರಿಕ ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದೆ. ಇದರಿಂದ ಪಾಕ್ ಮುಖವಾಡ ಕಳಚಿದಂತಾಗಿದೆ.
ಭಾರತ ಹಾಗೂ ಪಾಕಿಸ್ಥಾನ ಸಂಬಂಧದ ಹಲವಾರು ವಿಚಾರಗಳಲಲ್ಲಿ ಪಾಕಿಸ್ಥಾನ ಪದೇ ಪದೇ ಅಂತರ‌್ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಎದುರಿಸುತ್ತದೆ. ಭಯೋತ್ಪಾದನೆಯ ನೆಲವಾಗಿರುವ ಪಾಕ್‌ಗೆ, ಈ ಸಾಕ್ಷ್ಯಾಧಾರಗಳು ಜಾಗತಿಕ ತೀವ್ರ ಮುಖಭಂಗಕ್ಕೆ ಕಾರಣವಾಗಿದೆಎಂದೇ ವಿಶ್ಲೇಷಿಸಲಾಗುತ್ತಿದೆ. ಪಾಕ್‌ನ ಭಯೋತ್ಪಾದಕ ಕೃತ್ಯ ಕುರಿತ ಭಾರತದ ಆರೋಪಕ್ಕೆ, ಇನ್ನಷ್ಟು ಬಲಬಂದಂತಾಗಿದೆ.
Discussion about this post