ಬೆಂಗಳೂರು: ಅ:28: ಕರ್ನಾಟಕ ಜನತಾ ಪಕ್ಷ (ಕೆಜೆಪಿ ಸಂಸ್ಥಾಪಕ) ಪದ್ಮನಾಭ ಪ್ರಸನಕ್ಕೆ ಮುಖಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ.
ಶುಕ್ರವಾರ ಮಧ್ಯಾಹ್ನ ಬೆಂಗಳೂರು ಪ್ರೆಸ್ ಕ್ಲಬ್ಗೆ ಆಗಮಿಸುತ್ತಿದ್ದ ವೇಳೆ ಕಿಡಿಗೇಡಿಗಳು ವಾಹನದ ಇಂಜಿನ್ ಆಯಿಲ್ನ್ನು ಪದ್ಮನಾಭ ಅವರ ಮುಖಕ್ಕೆ ಎರಚಿದ್ದಾರೆ.
ಘಟನೆಯ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪನವರ ಬೆಂಬಲಿಗರು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ್ದು, ಈ ಹಿಂದೆಯೂ ಶಿವಮೊಗ್ಗದಲ್ಲಿ ಹಲ್ಲೆಗೆ ಯತ್ನಿಸಿದ್ದರು, ಆ ವೇಳೆ ಮಾಧ್ಯಮದವರು ರಕ್ಷಣೆ ನೀಡಿದ್ದರು ಎಂದು ಹೇಳಿದರು.
ಇನ್ನು ಬಿಎಸ್ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಮದುವೆಯಾಗಿರುವ ಬಗ್ಗೆ ಹೇಳಲು ಸುದ್ದಿಗೋಷ್ಠಿ ನಡೆಸಲು ಬಂದಿದ್ದೆ ಎಂದು ಪದ್ಮನಾಭ ಹೇಳಿದರು.
Discussion about this post