Read - < 1 minute
ಬೆಂಗಳೂರು: ದೊಡ್ಮನೆ ಹುಡುಗ ಚಿತ್ರದ ಯಶಸ್ಸಿನಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರೆ ಎಂಬ ಸುದ್ಧಿ ಗಾಂಧಿನಗರದಿಂದ ಬಂದಿದೆ. ರಣ ವಿಕ್ರಮ ಚಿತ್ರ ನಿರ್ದೇಶಿಸಿದ್ದ ಪವನ್ ಒಡೆಯರ್ ಪುನೀತ್ ರ ಈ ಹೊಸ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ.
ವೀರ ಆಂಜನೇಯ ಪ್ರಸಾದ ಎಂಬ ಹೊಸ ಚಿತ್ರ ಪುನೀತ್ ಗೆ ಸಿದ್ಧವಾಗುತ್ತಿದೆ ಎನ್ನಲಾಗಿದ್ದು, ಗಾಂಧಿನಗರದಲ್ಲಿ ಸಂಚಲನ ಮೂಡಿಸಿದೆ ಎನ್ನುತ್ತವೆ ಮೂಲಗಳು. ಈ ಶೀರ್ಷಿಕೆಗೆ ನಟನ ಅಭಿಮಾನಿಗಳು ಹರ್ಷಗೊಂಡಿದ್ದಾರಂತೆ!
ಈ ಸಿನೆಮಾದ ಬಗ್ಗೆ ಇನ್ನು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ಶಿರಿಷಾ ಲಗದಪತಿ ನಿರ್ಮಿಸುತ್ತಿರುವ ಈ ಸಿನೆಮಾದ ಮುಹೂರ್ತ ಅಕ್ಟೋಬರ್ 11 ಕ್ಕೆ ನೆರವೇರಲಿದೆಯಂತೆ. ಮತ್ತು ಸಿನೆಮಾದ ಚಿತ್ರೀಕರಣ ಮುಂದಿನ ವರ್ಷದ ಪ್ರಾರಂಭದಲ್ಲಿ ಶುರುವಾಗುವ ಸಾಧ್ಯತೆಯಿದೆ.
Discussion about this post