Read - < 1 minute
ತುಮಕೂರು: ಸೆ:10: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ನಿನ್ನೆ ಹಮ್ಮಿಕೊಂಡಿದ್ದ ಹೋರಾಟದ ವೇಳೆ ಕೆಲ ಪ್ರತಿಭಟನಾಕಾರರು ಕೆಆರ್ಎಸ್ ಡ್ಯಾಮ್ ಗೇಟ್ಗಳನ್ನು ಬಂದ್ ಮಾಡಲು ಯತ್ನಿಸಿದರಲ್ಲದೆ ಅಣೆಕಟ್ಟೆಗೆ ಹಾರಲು ಪ್ರಯತ್ನಿಸಿದರು. ಹಾಗಾಗಿ ಅವರನ್ನು ತಡೆಯುವ ಸಲುವಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸಿದ್ದಾರ್ಥ ಅಕಾಡೆಮಿಕ್ ಹೈಯರ್ ಎಜ್ಯುಕೇಷನ್ನ 5ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಲಾಠಿ ಚಾಜರ್್ ಮಾಡದಂತೆ ಪೊಲೀಸರಿಗೆ ಆದೇಶ ನೀಡಲಾಗಿತ್ತು. ಆದರೆ ಕೆಲವು ಪ್ರತಿಭಟನಾಕಾರರು ಡ್ಯಾಮ್ಗೆ ಹಾರಲು ಪ್ರಯತ್ನಿಸಿದ್ದರು. ಹಾಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಅವರನ್ನು ತಡೆಯಲು ಲಘು ಲಾಠಿ ಪ್ರಹಾರ ಮಾಡಲಾಗಿದೆ ಎಂದು ಸಮಥರ್ಿಸಿಕೊಂಡರು.
ಅದೃಷ್ಟವಶಾತ್ ಯಾರಿಗೂ ತೊಂದರೆಯಾಗದಿರುವುದು ಸಮಾಧಾನದ ವಿಚಾರ ಎಂದರು. ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ಪರ ವಕಾಲತು ವಹಿಸಿರುವ ವಕೀಲ ಫಾಲಿ ನಾರಿಮನ್ ಅವರನ್ನು ಕೈ ಬಿಡುವ ವಿಚಾರದ ಬಗ್ಗೆ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಏನು ಚಚರ್ೆ ನಡೆಯುತ್ತದೋ ತಿಳಿಯದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಫಾಲಿ ನಾರಿಮನ್ನವರು 35 ವರ್ಷಗಳಿಂದ ರಾಜ್ಯದ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಾರಿಮನ್ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಅವರನ್ನು ಬದಲಾವಣೆ ಮಾಡಬೇಕೆಂದು ಹಿಂದೆ ಸಿದ್ದರಾಮಯ್ಯನವರು ಒತ್ತಾಯ ಮಾಡಿದ್ದು ನಿಜ. ಆದರೆ ನಾರಿಮನ್ ಅಸಮರ್ಥರೆಂದು ಬದಲಾವಣೆ ಮಾಡುವಂತೆ ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ರಮ್ಯಾ ಪದೇ ಪದೇ ಗೊಂದಲದ ಹೇಳಿಕೆ ನೀಡುತ್ತಾರಲ್ಲ ಎಂದು ಕೇಳಿದ ಪ್ರಶ್ನೆಗೆ, ಅವರ ವೈಯಕ್ತಿಕ ಅಭಿಪ್ರಾಯವನ್ನು ಆಕೆ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಮಾತನಾಡಲು ಆಗುವುದಿಲ್ಲ. ಅವರೇನಾದರೂ ಪಕ್ಷಕ್ಕೆ ಮುಜುಗರವಾದಂತಹ ಹೇಳಿಕೆ ಕೊಟ್ಟರೆ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಕ್ರಮ ಕೈಗೊಳ್ಳಬಹುದಷ್ಟೇ ಎಂದರು.
ತಮ್ಮ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ವೈದ್ಯಕೀಯ ಸೀಟುಗಳ ಅಜರ್ಿಗಳು ಸ್ವೀಕೃತಿಯಾಗಿರಲಿಲ್ಲ. ಈಗ ಎಲ್ಲವೂ ಸರಿ ಹೋಗಿದೆ. ಸುಮಾರು 450 ಅಜರ್ಿಗಳು ಆನ್ಲೈನ್ನಲ್ಲಿ ಬಂದಿವೆ. ಯಾವುದೇ ತೊಂದರೆ ಇಲ್ಲ ಎಂದು ಪರಮೇಶ್ವರ್ ಈ ವೇಳೆ ಸ್ಪಷ್ಟಪಡಿಸಿದರು.
Discussion about this post