ನವದೆಹಲಿ:ಆ: 30:ಪ್ರಧಾನಿ ನರೇಂದ್ರ ಮೋದಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮೂಲಕ ದೆಹಲಿಯನ್ನು ನಾಶಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಆರೋಗ್ಯ ಕಾರ್ಯದರ್ಶಿ ತರುಣ್ ಸೇನ್ ಹಾಗೂ ಲೋಕೋಪಯೋಗಿ ಕಾರ್ಯದಶರ್ಿ ಸರ್ವಗ್ಯಾ ಶ್ರೀವಾಸ್ತವ ಅವರ ವರ್ಗಾವಣೆ ಈ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಲೆ.ಗವರ್ನರ್ ಮೂಲಕ ದೆಹಲಿ ಹಾಳುಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ವರ್ಗಾವಣೆ ಯಾಗಿರುವ ಇಬ್ಬರು ಅಧಿಕಾರಿಗಳು ದೆಹಲಿಯಲ್ಲಿ ನಡೆಯುತ್ತಿದ್ದ ಮೊಹಲ್ಲಾ ಕ್ಲಿನಿಕ್ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಸರ್ಕಾರಿ ಶಾಲೆಗಳ ಕಟ್ಟಡ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆ.30 ರಂದು ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್ ಖುದ್ದು ಅನೇಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ವರ್ಗಾವಣೆ ಕಡತಗಳನ್ನು ಮುಖ್ಯಮಂತ್ರಿ, ಸಚಿವರುಗಳಿಗೂ ನೀಡಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತರುಣ್ ಸೇನ್ ಹಾಗೂ ಸರ್ವಗ್ಯಾ ಶ್ರೀವಾಸ್ತವ ಅವರನ್ನು ವರ್ಗಾವಣೆ ಮಾಡದಂತೆ ಲೆಫ್ಟಿನೆಂಟ್ ಗೌರ್ನರ್ ಗೆ ನಿರಂತರವಾಗಿ ಮನವಿ ಮಾಡಿದ್ದರು. ಆದಾಗ್ಯೂ ಸಹ ಈ ಇಬ್ಬರು ಅಧಿಕಾರಿಗಳನ್ನು ವಗರ್ಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
Discussion about this post