Read - < 1 minute
ಮುಂಬೈ, ಸೆ.13: ಬಿಎಂಸಿಯಲ್ಲಿ ಭ್ರಷ್ಟಾಚಾರವಿದೆ ಎನ್ನುವ ಕಾರಣಕ್ಕೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಕಾಮಿಡಿಯನ್ ಕಪಿಲ್ ಶರ್ಮಾ ಸಂಕಷ್ಟಕ್ಕೆ ಸಿಲುಕಿದ್ದು, ಅವರ ವಿರುದ್ಧವೇ ಅನಧಿಕೃತ ನಿವಾಸ ನಿರ್ಮಿಸಿದ್ದಾರೆ ಎಂದು ಎಫ್ ಐಆರ್ ದಾಖಲಾಗಿದೆ.
ಉತ್ತರ ಮುಂಬೈನ ಸಬರ್ಬನ್ ಗೋರೆಗಾಂವ್ ನಲ್ಲಿರುವ ಕಪಿಲ್ ಶರ್ಮಾ ನಿವಾಸ ಅನಧಿಕೃತ ಕಟ್ಟಡ ಎಂದು ಬಿಎಂಸಿ ಸಹ ಎಂಜಿನಿಯರ್ ಒಬ್ಬರು ಎಫ್ಐಆರ್ ದಾಖಲಿಸಿದ್ದಾರೆ. ನಟ ಇರ್ಫಾನ್ ಖಾನ್ ಮೇಲೆ ಕೂಡ ಇದೇ ರೀತಿಯ ಪ್ರಕರಣ ದಾಖಲಾಗಿದೆ. ಕಪಿಲ್ ಶರ್ಮಾ ನಿಯಮ ಮೀರಿ ತಮ್ಮ ಫ್ಲಾಟ್ ನಲ್ಲಿ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ ಎಂದು ಬಿಎಂಸಿ ಅಧಿಕಾರಿ ಅಭಯ್ ಜಗ್ ತಪ್ ಆರೋಪಿಸಿದ್ದಾರೆ.
ಬಿಎಂಸಿಗೆ 5 ಲಕ್ಷ ಲಂಚ ಕೊಟ್ಟಿದ್ದೇನೆ, ಇದೇನಾ ಅಚ್ಛೇದಿನ್ ಅಂತಾ ಕಳೆದ ವಾರ ಟ್ವೀಟ್ ಮಾಡಿದ್ದ ಕಪಿಲ್ ಶರ್ಮಾ ವಿವಾದದ ಕಿಡಿ ಹೊತ್ತಿಸಿದ್ದರು. ಆದ್ರೆ ಕಪಿಲ್ ಶರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದ ಬಿಎಂಸಿ, ವರ್ಸೋವಾದಲ್ಲಿರುವ ಅವರ ಕಚೇರಿ ಅನಧಿಕೃತ ಎಂದಿತ್ತು. ಲಂಚ ಪಡೆದ ಅಧಿಕಾರಿ ಹೆಸರು ಹೇಳಿಲ್ಲ ಎಂಬ ಕಾರಣಕ್ಕೆ ಎಂಎನ್ಎಸ್ ನ ರಾಜ್ ಠಾಕ್ರೆ ಕೂಡ ಕಪಿಲ್ ವಿರುದ್ಧ ಕೇಸ್ ಹಾಕಿದ್ದಾರೆ.
Discussion about this post